Home Local ಕುಮಟಾದ ಹೆಗಡೆಯಲ್ಲಿ ಚತುರ್ವೇದ ಪಾರಾಯಣ ಮಹಾಸತ್ರಕ್ಕೆ ಚಾಲನೆ

ಕುಮಟಾದ ಹೆಗಡೆಯಲ್ಲಿ ಚತುರ್ವೇದ ಪಾರಾಯಣ ಮಹಾಸತ್ರಕ್ಕೆ ಚಾಲನೆ

SHARE

ಕುಮಟಾ: ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾಂಬೆಯ ಸನ್ನಿಧಿಯಲ್ಲಿ ವಿಪ್ರ ಒಕ್ಕೂಟದ ಸಂಯೋಜನೆಯಲ್ಲಿ ಅಧಿಕಮಾಸ ಪೂರ್ತಿ ನಡೆಯಲಿರುವ “ಚತುರ್ವೇದ ಪಾರಾಯಣ ಮಹಾಸತ್ರ” ಕ್ಕೆ ಇಂದು ಚಾಲನೆ ದೊರಕಿತು. ಇಡಗುಂಜಿ ದೇವಸ್ಥಾನ ದ ಧರ್ಮದರ್ಶಿಗಳಾದ ಗಣಪತಿ ಸಭಾಹಿತ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ” ಇದೊಂದು ಅಪರೂಪದ ಕಾರ್ಯಕ್ರಮ ವಾಗಿದ್ದು ಲೋಕ ಕಲ್ಯಾಣಾರ್ಥ ಇಷ್ಟು ದೊಡ್ಡ ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ವಿಪ್ರ ಒಕ್ಕೂಟದ ಕಾರ್ಯ ಅಭಿನಂದನಾರ್ಹ” ಎಂದರು.

ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಮಹಾಸತ್ರ ಪ್ರಾರಂಭಗೊಂಡಿದ್ದು 29 ದಿನಗಳ ಕಾಲ ನಡೆಯಲಿದೆ.

ವಿದ್ವಾನ್ ಶಂಕರ ಭಟ್ಟ, ಸಂಘದ ಅಧ್ಯಕ್ಷರಾದ ಡಾ.ವಿ.ಕೆ.ಹಂಪಿಹೊಳಿ, ಕಾರ್ಯದರ್ಶಿ ಡಾ.ಗೋಪಾಲಕೃಷ್ಣ ಹೆಗಡೆ, ಖಜಾಂಚಿ ಡಾ. ಉಮೇಶ ಶಾಸ್ತ್ರಿ, ಕಾರ್ಯಕಾರಿಣಿ ಸಮಿತಿಯ ರವೀಂದ್ರ ಭಟ್ಟ ಸೂರಿ, ಸುಬ್ರಹ್ಮಣ್ಯ ಭಟ್ಟ, ರಾಘವೇಂದ್ರ ಮಾನೀರ, ಗಣಪತಿ ಭಟ್ಟ.ಮುಂತಾದವರು ಹಾಜರಿದ್ದರು.