Home Important 7 ದಿನ, 3 ವರ್ಷ ಹಾಗೂ 55ಗಂಟೆ! ಉಳಿದಿಲ್ಲ ಸರಕಾರ

7 ದಿನ, 3 ವರ್ಷ ಹಾಗೂ 55ಗಂಟೆ! ಉಳಿದಿಲ್ಲ ಸರಕಾರ

SHARE

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನಂತೆ ವಿಧಾನಸಭೆ ಶನಿವಾರ ನಡೆದ ಚೊಚ್ಚಲ ಅಧಿವೇಶನದಲ್ಲಿ ಬಿಎಸ್ ಯಡಿಯೂರಪ್ಪ ವಿಶ್ವಾಸಮತ ಪ್ರಸ್ತಾಪ ಮಾಡದೇ ರಾಜೀನಾಮೆ ಘೋಷಿಸಿದ್ದರು. ಅಲ್ಲದೇ ಕೇವಲ 55 ಗಂಟೆಗಳಲ್ಲೇ ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಂತಾಗಿದೆ.

ರಾಜಭವನಕ್ಕೆ ತೆರಳಿ ಬಿಎಸ್ ಯಡಿಯೂರಪ್ಪ ರಾಜ್ಯಪಾಲ ವಿಆರ್ ವಜೂಬಾಯಿವಾಲಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಹೋರಾಟದ ಹಾದಿ ಮೂಲಕ, ರೈತರ ಪರ ಚಳವಳಿಯೊಂದಿಗೆ ನಾಯಕರಾಗಿ ಹೊರಹೊಮ್ಮಿದ್ದ ಬಿಎಸ್ ಯಡಿಯೂರಪ್ಪ ಮೂರು ಬಾರಿ ಸಿಎಂ ಹುದ್ದೆ ಅಲಂಕರಿಸಿದ್ದರು. ಆದರೆ ಕೇವಲ ಒಂದು ಬಾರಿ ಮಾತ್ರ ದೀರ್ಘಾವಧಿ ಹೊರತು ಪಡಿಸಿ ಉಳಿದ ಎರಡು ಬಾರಿ ಅತೀ ಕಡಿಮೆ ಅವಧಿಯದ್ದಾಗಿದೆ ಎಂಬುದು ಗಮನಾರ್ಹ.

7 ದಿನ, 3 ವರ್ಷ ಹಾಗೂ 55ಗಂಟೆ!

ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ(ಮೇ 17) ಬಿಎಸ್ ಯಡಿಯೂರಪ್ಪ ಕೇವಲ 55 ಗಂಟೆಯಲ್ಲಿ ವಿಶ್ವಾಸಮತ ಯಾಚಿಸದೇ ಅಧಿಕಾರ ಕಳೆದುಕೊಂಡಿದ್ದಾರೆ. ಇದಕ್ಕೂ ಮೊದಲು 2007ರಲ್ಲಿ ಕೇವಲ 7 ದಿನ ಮುಖ್ಯಮಂತ್ರಿಯಾಗಿದ್ದು ಬಳಿಕ ರಾಜೀನಾಮೆ ಕೊಟ್ಟಿದ್ದರು. 2008ರ ಮೇ 30ರಿಂದ 2011ರವರೆಗೆ ಅಂದರೆ ಸುಮಾರು 3 ವರ್ಷ 62 ದಿನಗಳ ಕಾಲ ಸಿಎಂ ಆಗಿ ಅಧಿಕಾರದಿಂದ ಕೆಳಗಿಳಿದಿದ್ದರು.