Home Local ಶ್ರೀ ಶ್ರೀಮಜ್ಜಗದ್ಗುರು ಹನುಮಾರೂಢ ಸ್ವಾಮೀಜಿಯವರಿಗೆ ‘ಗೋಕರ್ಣ ಗೌರವ’

ಶ್ರೀ ಶ್ರೀಮಜ್ಜಗದ್ಗುರು ಹನುಮಾರೂಢ ಸ್ವಾಮೀಜಿಯವರಿಗೆ ‘ಗೋಕರ್ಣ ಗೌರವ’

SHARE

ಗೋಕರ್ಣ: ಪ ಪೂ ಶ್ರೀ ಶ್ರೀಮಜ್ಜಗದ್ಗುರು ಹನುಮಾರೂಢ ಸ್ವಾಮೀಜಿ , ಅನುಷ್ಠಾನ ಆಶ್ರಮ , ಗೋಕಾಕ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 497ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ವೇ ರಾಮಚಂದ್ರ ಜಂಭೆ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .