Home Local ಶ್ರೀ ಶ್ರೀ ರಾಜೇಶ್ವರಾನಂದ ಸ್ವಾಮೀಜಿಯವರಿಗೆ ಗೋಕರ್ಣ ಗೌರವ

ಶ್ರೀ ಶ್ರೀ ರಾಜೇಶ್ವರಾನಂದ ಸ್ವಾಮೀಜಿಯವರಿಗೆ ಗೋಕರ್ಣ ಗೌರವ

SHARE

ಗೋಕರ್ಣ: ಪ ಪೂ ಶ್ರೀ ಶ್ರೀ ರಾಜೇಶ್ವರಾನಂದ ಸ್ವಾಮೀಜಿ , ಮಹಾಯೋಗಿಮಠ, ಬೀಳಗಿ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 498ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ವಿಶ್ವಕರ್ಮ ಸಮಾಜದ ಶ್ರೀ ಕುಮಾರ ಗಂಗಾಧರ ಆಚಾರಿ ಗೋಕರ್ಣ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು . www.srigokarna.org