Home Local ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಶಾಸಕ‌ ದಿನಕರ‌ ಶೆಟ್ಟಿ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ.

ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಶಾಸಕ‌ ದಿನಕರ‌ ಶೆಟ್ಟಿ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ.

SHARE

ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಯವರು ಮಂಗಳವಾರ ಬೆಳಿಗ್ಗೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಲ್ಲ ಅಧಿಕಾರಿಗಳನ್ನು ಕರೆದು ಸೌಹಾರ್ದ ಮಾತುಕತೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು.

ಹಿಂದೆ ಯಾವ ರೀತಿ ಕೆಲಸ ಮಾಡಿದ್ದೀರಿ ಗೊತ್ತಿಲ್ಲ ಆದರೆ ಈಗ ಕಾಲ ಬದಲಾಗಿದೆ ಎಲ್ಲ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುವಂತೆ ಹೇಳಿದರಲ್ಲದೇ ಯಾವುದೇ ರಾಜಕೀಯ ದಲ್ಲಿ ಭಾಗಿಯಾಗದಂತೆ ಕಟ್ಟುನಿಟ್ಟಾಗಿ ಆದೇಶಿಸಿದರು.

ತಹಶೀಲ್ದಾರ್ ಕಛೇರಿಯಲ್ಲಿ ಮ್ಯುಟೇಶನ್ ಎಂಟ್ರಿ ಮತ್ತು ಇತರ ದಾಖಲೆಗಳು 15 ದಿನಗಳಿಂದ ಸಿಗುತ್ತಿಲ್ಲ ಹಾಗೂ ಜನರನ್ನು ಬಹಳ ಕೀಳಾಗಿ ಅಗೌರವದಿಂದ ಕಾಣುತ್ತಾರೆ ಎಂದು ಸಾರ್ವಜನಿಕರು ದೂರಿದಾಗ ಶಾಸಕರು ತಹಶೀಲ್ದಾರ್ ರವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಯಾಕೆ ಈತರ ಆಗುತ್ತಿದೆ ಕೂಡಲೇ ಪೂರೈಸುವ ಕೆಲಸ ಮಾಡಿ ಎಂದರು ಹಾಗೂ ಜನರನ್ನು ಗೌರವಿಸುವಂತೆ ಮತ್ತು ಯಾವುದೇ ಇಲಾಖೆಯವರೂ ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗದಂತೆ ಕೆಲಸ ಮಾಡಿಕೊಡಬೇಕು ಎಂದರು .

ಇವೆಲ್ಲವುಗಳನ್ನು ನೋಡಿ ಅಂತೂ ಎಲ್ಲ ಅಧಿಕಾರಿಗಳು ಶಾಸಕರ ಗಟ್ಟಿ ನಿಲುವಿಗೆ ತಬ್ಬಿಬ್ಬಾಗಿರುವುದು ಅಂತೂ ಸತ್ಯ..