Home Local ಸಿಡಿಲ ಬಡಿತಕ್ಕೆ ಮೂವರಿಗೆ ಗಾಯ: ಕುಮಟಾದ ಬರ್ಗಿಯಲ್ಲಿ ದುರ್ಘಟನೆ

ಸಿಡಿಲ ಬಡಿತಕ್ಕೆ ಮೂವರಿಗೆ ಗಾಯ: ಕುಮಟಾದ ಬರ್ಗಿಯಲ್ಲಿ ದುರ್ಘಟನೆ

SHARE

ಕುಮಟಾ: ಮಳೆಗಾಲದ ಪ್ರರಂಭಕ್ಕೆ ಒಂದೊಂದೆ ಅವಘಡಗಳು ಪ್ರಾರಂಭವಾಗುತ್ತಿದ್ದು ತಾಲೂಕಿನಾದ್ಯಂತ ನಿನ್ನೆ ರಾತ್ರಿ ಭಾರೀ ಸಿಡಿಲು ಗುಡುಗಿಗೆ ಮೂರು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.

ಸಿಡಿಲು ಬಡಿದ ಪರಿಣಾಮ ಕುಮಟಾ ತಾಲೂಕಿನ ಬರ್ಗಿಯ ದೇವರಾಯ ಪಟಗಾರ, ಲಕ್ಷ್ಮಿ ಪಟಗಾರ, ಹೇಮಾ ಎಂಬುವವರಿಗೆ ಗಾಯವಾಗಿದೆ.


ಸಿಡಿಲಿನ ರಭಸಕ್ಕೆ ಮನೆಯ ಗೋಡೆ ಬಿರುಕುಗೊಂಡಿದ್ದು, ಹಂಚು ಹಾರಿಹೋಗಿದೆ ಎಂಬುದಾಗಿ ವರದಿಯಾಗಿದೆ. ರಾತ್ರಿ ಈ ಮೂವರು ಮನೆಯಲ್ಲಿ ಊಟ ಮಾಡುತ್ತಿದ್ದ ಸಮಯದಲ್ಲಿ ಸಿಡಿಲು ಬಡಿದಿದೆ.

ಗಾಯಗೊಂಡವರನ್ನು ಅಲ್ಲಿನ ಜನ ತಕ್ಷಣ ಕುಮಟಾದ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ‌. ಗಾಯಗೊಂಡವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಇನ್ನೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಊರಿನ‌ ಜನ ಆಕ್ರೋಷ ಹೊರ ಹಾಕಿದ್ದಾರೆ.

ಅವಘಡ ಸಂಭವಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಗಾಯಾಳುಗಳಿಗೆ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ.