Home Important ಇಂಧನ ಬೆಲೆ ಇಳಿಸಲು ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ ರಾಹುಲ್ ಗಾಂಧಿ!

ಇಂಧನ ಬೆಲೆ ಇಳಿಸಲು ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ ರಾಹುಲ್ ಗಾಂಧಿ!

SHARE

ನವದೆಹಲಿ: ಫಿಟ್ ನೆಸ್ ಬಗ್ಗೆ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ಸವಾಲನ್ನು ಸ್ವೀಕರಿಸುತ್ತೇನೆ ಅಂತ ಹೇಳಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನೀವು ವಿರಾಟ್ ಕೊಹ್ಲಿಯವರ ಫಿಟ್ ನೆಸ್ ಸವಾಲನ್ನು ಸ್ವೀಕರಿಸಿರುವುದು ಸಂತೋಷ. ಈಗ ನಾನೊಂದು ಸವಾಲು ಹಾಕುತ್ತೇನೆ, ಇಂಧನ ಬೆಲೆ ಇಳಿಸಿ, ಇಲ್ಲದಿದ್ದರೆ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿ ಬೇರೆ ದಾರಿಯಿಲ್ಲದೆ ಇಂಧನ ಬೆಲೆಯನ್ನು ಇಳಿಸುವಂತೆ ನಾವು ಮಾಡುತ್ತೇವೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.