Home Article ಅವರವರ ಮನಸ್ಸಿನೊಳಗೆ ಹೊಕ್ಕ ಹೊರತು ಯಾರಿಗೂ ಯಾರೂ ತೊಂದರೆ ಕೊಡಲು ಶಕ್ಯವಿಲ್ಲ.

ಅವರವರ ಮನಸ್ಸಿನೊಳಗೆ ಹೊಕ್ಕ ಹೊರತು ಯಾರಿಗೂ ಯಾರೂ ತೊಂದರೆ ಕೊಡಲು ಶಕ್ಯವಿಲ್ಲ.

SHARE

ಅವರವರ ಮನಸ್ಸಿನೊಳಗೆ ಹೊಕ್ಕ ಹೊರತು ಯಾರಿಗೂ ಯಾರೂ ತೊಂದರೆ ಕೊಡಲು ಶಕ್ಯವಿಲ್ಲ. ಶ್ರೀಗುರುವಿನ ರಕ್ಷೆ ಇರುತ್ತದೆ. ಪೂರ್ವಜನ್ಮದ ಕಾರಣದಿಂದ ಅಥವಾ ವಿಘ್ನ ಮಾಡಬೇಕೆಂದು, ತೊಂದರೆ ಕೊಡಲು ನೋಡಿದರೆ, ಶ್ರೀಗುರು ತನ್ನ ಕೃಪೆಯ ಅಭಯ ಕವಚದಿಂದ ಅನನ್ಯ ಸಾಧಕರ ರಕ್ಷಣೆ ಮಾಡುತ್ತಾನೆ.

(ಶ್ರೀ ಶಂಕರ ಪಂಡಿತ ಸಜ್ಜನಗಡ, ಅವರ ಪ್ರಶ್ನೆ ಕ್ರಮಾಂಕಗಳಿಗನುಸಾರವಾಗಿ ಸ್ವಾಮಿಗಳ ಉತ್ತರವನ್ನೊಳಗೊಂಡ ಪತ್ರದ ಮೂರನೆಯ ಭಾಗ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

೧. ಅದೊಂದು ಸಮಾಧಿಯದೇ ಅವಸ್ಥೆ ಆದರೆ ನಿರ್ವಿಕಲ್ಪವಲ್ಲ. ಸವಿಕಲ್ಪ ಸಮಾಧಿಯ ಅವಸ್ಥೆ.

೨. ದರ್ಶನ ತೆಗೆದುಕೊಳ್ಳಲು ಹೋದ, ಧ್ಯಾನ ಧರಿಸಲು ನೋಡಿದ, ಮೂರ್ತಿಯ ದರ್ಶನ ನಮ್ಮಲ್ಲೇ ಆಗುವದು ಒಂದು ಅದ್ವಿತೀಯ ಸ್ವರೂಪದ ದ್ಯೋತಕವೇ.

‘ಅವಧ್ಯಾ ಆಪಣ ಏಕ| ಐಸಾ ಜ್ಞಾನಾಚಾ ವಿವೇಕ|’   – ಶ್ರೀ ಸಮರ್ಥ

೩. ರಾತ್ರಿ ಅಪರಾತ್ರಿ ೧-೨ ಗಂಟೆಗೆ ಶೌಚ ಅನಿಸಿದರೆ, ಶೌಚ ಮುಗಿಸಿ, ಕೈಕಾಲು ತೊಳೆದು, ಸ್ನಾನಕ್ಕೆ ಒಲೆ ಹೊತ್ತಿಸಿ, ವಸ್ತ್ರ ಬದಲು ಮಾಡಿ, ಮಾರ್ಜನ – ಆಚಮನ ಮಾಡಿ ಧ್ಯಾನಕ್ಕೆ ಕುಳಿತುಕೊಳ್ಳಬೇಕು ಮತ್ತು ನಮ್ಮ ನಿಗಡಿತ ವೇಳೆ ೩ ಅಥವಾ ನಾಲ್ಕು ಗಂಟೆಗೆ ಸ್ನಾನ ಮಾಡಬೇಕು. ಅಪರಾತ್ರಿ ಸ್ನಾನ ಮಾಡುವದು ಸರಿಹೊಂದುವದಿಲ್ಲ. ಸ್ನಾನ ಮಾಡುವ ವೇಳೆ ೩ ಗಂಟೆಯ ನಂತರ.

೪. ಕೂಷ್ಮಾಂಡ ಒಂದು ವಾಯುರೂಪ ದೇಹದ ಬ್ರಹ್ಮರಾಕ್ಷಸದಂತಹದೇ ಜಾತಿಯಾಗಿದೆ. ಆ ಆ ಯೋನಿಯಲ್ಲಿ ಹುಟ್ಟಲಿಕ್ಕೆ ಅವರ ಆ ಆ ಪೂರ್ವಕರ್ಮವೇ ಕಾರಣವಾಗುತ್ತದೆ. ಈಶ್ವರ ತಕ್ಕಡಿ ಹಿಡಿದು ಕುಳಿತುಕೊಂಡಿರುತ್ತಾನೆ. ಒಂದರಲ್ಲಿ ಅವನ ಕರ್ಮ ಮತ್ತು ಮತ್ತೊಂದರಲ್ಲಿ ಅವನ ಕರ್ಮಫಲವೆಂದು, ತೂಕ ಮಾಡೇ, ತಕ್ಕ ಯೋನಿಯನ್ನು ಅವನಿಗೆ ಕೊಡುತ್ತಾನೆ. ಅವರವರ ಮನಸ್ಸಿನೊಳಗೆ ಬಂದಹೊರತು ಯಾರಿಗೂ ಯಾರೂ ತೊಂದರೆ ಕೊಡಲು ಶಕ್ಯವಿಲ್ಲ. ಶ್ರೀಗುರುವಿನ ರಕ್ಷೆ ಇರುತ್ತದೆ. ಪೂರ್ವಜನ್ಮದ ಕಾರಣದಿಂದ ಅಥವಾ ವಿಘ್ನ ಮಾಡಬೇಕೆಂದು ತೊಂದರೆ ಕೊಡಲು ನೋಡಿದರೆ ಶ್ರೀಗುರು ತನ್ನ ಕೃಪೆಯ ಅಭಯ ಕವಚದಿಂದ ಅನನ್ಯ ಸಾಧಕರ ರಕ್ಷಣೆ ಮಾಡುತ್ತಾನೆ. ಅವರ ಗುರುನಿಷ್ಠೆಯೇ ಅವನ ತಾರಕವಾಗುತ್ತದೆ. ಗುರುಗಳ, ಗುರುತುಲ್ಯ ವ್ಯಕ್ತಿಗಳ ಅಪಮಾನ, ತುಂಬಿದ ಸಭೆಯಲ್ಲಿ ಇತರ ಪಂಡಿತರ ತೇಜೋಭಂಗ, ಸತ್ಪಾತ್ರಿಗಳಿಗೆ ವಿದ್ಯಾದಾನ ಮಾಡದಿರುವದು, ವಿದ್ವತ್ತೆಯ ಗರ್ವ ಪಡುವದು, ತಮ್ಮ ಹಣದ ಅಪಹರಣದಿಂದ ಜೀವ ತೆಗೆದುಕೊಳ್ಳುವದು, ಹಣದ ಮೋಹ ಹಿಡಿದಿರುವದು, ಯಾರ ಮೇಲಾದರೂ ದ್ವೇಷದಿಂದ ಪ್ರಾಣ ಬಿಡುವದು, ಪರಸ್ತ್ರೀಯಿಂದ ಭ್ರಷ್ಟರಾಗುವದು, ದುರ್ಮಾರ್ಗದ ಆಚರಣೆ, ದುಷ್ಟ ಉಪಾಸನೆ ಮಾಡುವದು ಇತ್ಯಾದಿ ಕಾರಣಗಳಿಂದ, ಹೀಗೆ ಮಾಡಿದಾತನು, ವಿರಕ್ತ ಅಥವಾ ತಪಸ್ವಿ ಆರಾಧಕನಾಗಿದ್ದರೆ, ಅವನು ಬ್ರಹ್ಮರಾಕ್ಷಸನಾಗುತ್ತಾನೆ. ಇದಕ್ಕಿಂತಲೂ ಕೆಳಮಟ್ಟದವನಾದರೆ ಭೂತ ಮತ್ತು ಅದಕ್ಕೂ ನಿಕೃಷ್ಟನಾಗಿದ್ದರೆ ಪಿಶಾಚಿಯಾಗುತ್ತಾನೆ. ಬ್ರಹ್ಮರಾಕ್ಷಸನಾಗಲು ಪುಣ್ಯಾಂಶ ಮತ್ತು ಬ್ರಾಹ್ಮಣ ಜನ್ಮವಿರಬೇಕು. ಭೂತನಾಗಲೂ ಪುಣ್ಯಾಂಶ ಬೇಕಾಗುತ್ತದೆ ಆದರೆ ಬ್ರಾಹ್ಮಣೇತರರೂ ಆಗುತ್ತಾರೆ. ಅವರಲ್ಲೂ ಹೆಚ್ಚಿನ ಪುಣ್ಯಾಂಶದ, ಹೆಚ್ಚಿನ ಒಳ್ಳೆಯ ಸ್ವಭಾವದವರೂ ಇರುತ್ತಾರೆ. ಹಾಗಿದ್ದವರು ಹೆಚ್ಚಿನ ಪುಣ್ಯಾಂಶದ ಮನುಷ್ಯರಿಗೆ ಉಪಕಾರ ಮಾಡುತ್ತಾರೆ. ಎಷ್ಟು ಪ್ರಮಾಣದಲ್ಲಿ ಪಾಪ ಹೆಚ್ಚಾಗಿರುತ್ತದೆಯೋ ಅಷ್ಟು ಪ್ರಮಾಣದಲ್ಲಿ ಅವರ ಪ್ರವೃತ್ತಿ ಹೆಚ್ಚೆಚ್ಚು ನೀಚವಾಗಿರುತ್ತದೆ. ಅನ್ಯ ಸ್ತ್ರೀಯಿಂದಾಗಿ ಭ್ರಷ್ಟರಾದವರು ಹೆಚ್ಚು ನೀಚರಿರುತ್ತಾರೆ. ನೀಚ ಜಾತಿಯ ಸ್ತ್ರೀಯಿಂದ ಭ್ರಷ್ಟರಾಗಿದ್ದವರಂತೂ ಅತ್ಯಂತ ನೀಚರಾಗಿರುತ್ತಾರೆ. ಅಸ್ಪರ್ಷ ಸ್ತ್ರೀಯ ಸಂಸರ್ಗದಿಂದ ಭ್ರಷ್ಟರಾದ ಬ್ರಹ್ಮರಾಕ್ಷಸರದ್ದು, ಅತಿ ನೀಚ ಜಾತಿ ಮತ್ತು ಸರ್ವಾಧಿಕ ನೀಚ ಸ್ವಭಾವವಿರುತ್ತದೆ. ಕೇಳಿದೆ ಎಂದು ಹೇಳಿದೆ. ನಿನಗೆ ಇದನ್ನು ಕೇಳುವ ಆವಶ್ಯಕತೆಯೇನು ಬಂತು? ಅಥವಾ ಈ ಶಬ್ದ ಕೇಳಿ, ಜಿಜ್ಞಾಸೆಯಿಂದ ಸುಮ್ಮನೇ ಕೇಳಿದೆಯೋ? ಸಾಧಕರು ಇಂತಹದರ ಬಗ್ಗೆ ಎಂದೂ ವಿಚಾರ ಮಾಡಬಾರದು. ಇರಲಿ.

(ಈ ಪತ್ರದ ನಾಲ್ಕನೆಯ ಭಾಗ ಮುಂದುವರಿಯುವದು)

೧೦೪. ಒಟ್ಟಿನಮೇಲೆ ಸ್ಥಾನಕ್ಕಿಂತಲೂ ಮನಸ್ಸಿನ ಏಕಾಗ್ರತೆ ಮತ್ತು ಏಕಾಂತ ಎಲ್ಲಿ ಹೆಚ್ಚಿಗೆ ಸಾಧಿಸಲು ಶಕ್ಯವೋ ಆ ಸ್ಥಳ ಸಾಧಕನಿಗೆ ಪ್ರಶಸ್ಥ. ಹಾಗಿರುವಾಗ, ಆ ಸ್ಥಳದ ಬಗ್ಗೆ ಯಾವುದೇ ನಿಯಮ ಅಡ್ಡಬರುವದಿಲ್ಲ.

(ಶ್ರೀ ಶಂಕರ ಪಂಡಿತ ಸಜ್ಜನಗಡ, ಅವರಿಗೆ ಬರೆದ ಪತ್ರದ ನಾಲ್ಕನೆಯ ಭಾಗ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

೪. (ಮುಂದುವರಿದ ಭಾಗ)

ಆ ರೀತಿಯ ಬ್ರಹ್ಮರಾಕ್ಷಸರ ಉದ್ಧಾರ ಯಾವುದೋ ಒಬ್ಬ ಉತ್ಕೃಷ್ಟ ಬ್ರಹ್ಮನಿಷ್ಠನಿಂದ ಆಗುತ್ತದೆ. ಅಧಿಕ ಪುಣ್ಯಾಂಶದ, ತಪಃಸಾಮರ್ಥ್ಯದ, ಆದರೆ ಭ್ರಷ್ಟನಾದ, ಬ್ರಹ್ಮರಾಕ್ಷಸ ಯೋನಿಯಲ್ಲಿರುವವನು, ಮತ್ತಾರ ಮಾತೂ ಕೇಳುವದಿಲ್ಲ. ಗುರುವಿನ ಬೆಂಬಲವಿದ್ದ ಆ ಬ್ರಹ್ಮನಿಷ್ಟ, ಶಿಷ್ಯರಿಗೆ ಈ ರೀತಿಯ ಎಲ್ಲ ಬಾಧೆಗಳಿಂದ ಬಿಡಿಸುತ್ತಾನೆ. ಎಲ್ಲರಿಗೂ ಬಾಧೆಯಾಗುತ್ತದೆ ಎಂದೇನಲ್ಲ. ಯಾರ ಪೂರ್ವಪುಣ್ಯ ಅಷ್ಟು ಸಬಲವಿಲ್ಲವೋ, ಯಾರಮೇಲೆ ಉಪಾಸನೆಯ ಅಷ್ಟು ಕೃಪೆ ಇಲ್ಲವೋ, ಯಾರು ಆ ರೀತಿ ಗುರುಕೃಪೆಗೆ ಪಾತ್ರತೆ ಪಡೆದಿಲ್ಲವೋ, ಯಾರಿಗೆ ಗೃಹಪೀಡೆ ಪ್ರಾರಂಭವಾಗಿದೆಯೋ ಅಂಥವರಿಗೇ ಇವರ ಬಾಧೆಯಾಗುತ್ತದೆ.

೫. ಶ್ರೀಧರಕುಟಿಯಲ್ಲಿ ಯಾವುದಾದರೂ ತೊಂದರೆಯಾಗುತ್ತಿದೆಯೇ? ತೊಂದರೆ ಏನೂ ಇಲ್ಲವಾದರೆ ಕುಟಿಯಲ್ಲಿ ಜಪ ಮಾಡಬೇಕು. ಆಸನ ಮತ್ತು ಕುಳಿತುಕೊಳ್ಳುವ ಸ್ಥಳ ಬದಲಿಸಬಾರದು. ತೊಂದರೆಯಾಗುತ್ತಿದ್ದರೆ ಅಥವಾ ಬೇರೆ ಸ್ಥಳದಲ್ಲಿ ಮನಸ್ಸು ಹೆಚ್ಚು ಏಕಾಗ್ರವಾಗುತ್ತಿದ್ದರೆ ಅಲ್ಲಿ ಕುಳಿತುಕೊಳ್ಳಬೇಕು. ಪ್ರತಿದಿನದ ಜಪದ ವೇಳೆ ಬಿಟ್ಟು, ಉಳಿದ ವೇಳೆ, ಕೆಲದಿವಸ ಜಪಕ್ಕೆ ಅಲ್ಲಿ ಕುಳಿತು ಪರೀಕ್ಷೆಮಾಡಿ ನೋಡಿ, ನಂತರ ಬೆಳಿಗ್ಗೆಯ ಜಪವನ್ನೂ ಅಲ್ಲೇ ಮಾಡಲು ಅಭ್ಯಂತರವಿಲ್ಲ. ಒಟ್ಟಿನಮೇಲೆ ಸ್ಥಾನಕ್ಕಿಂತಲೂ ಮನಸ್ಸಿನ ಏಕಾಗ್ರತೆ ಮತ್ತು ಏಕಾಂತ ಎಲ್ಲಿ ಹೆಚ್ಚಿಗೆ ಸಾಧಿಸಲು ಶಕ್ಯವೋ ಆ ಸ್ಥಳ ಸಾಧಕನಿಗೆ ಪ್ರಶಸ್ಥ. ಹಾಗಿರುವಾಗ, ಆ ಸ್ಥಳದ ಬಗ್ಗೆ ಯಾವುದೇ ನಿಯಮ ಅಡ್ಡಬರುವದಿಲ್ಲ. ಆದರೆ ಎರಡನೆಯ ಸ್ಥಳದ ಬಗ್ಗೆ ಸರಿಯಾಗಿ ತಿಳಿದುಕೊಂಡು ಮೊದಲಿನ ಸ್ಥಳ ಬಿಡಬೇಕು. ನೀನು ಉಳಿದುಕೊಂಡ ಮಠದಲ್ಲಿ ಹೆಚ್ಚಿನ ಏಕಾಂತ ಇರಬೇಕು, ಆದರೆ ನೀನೆಂದಲ್ಲಿ ಹೆಚ್ಚಿನ ಮನಃಶಾಂತಿ, ಚಿತ್ತೇಕಾಗ್ರತೆ ಹೆಚ್ಚಾಗಿ ಸಾಧಿಸಿದರೆ, ಅಧಿಕ ಆನಂದ ಆಗುತ್ತಿದ್ದರೆ ಅಲ್ಲೇ ಕುಳಿತುಕೊಳ್ಳಲೂ ನಾನು ಇಲ್ಲವೆನ್ನುವದಿಲ್ಲ.

೬. ಶ್ರೀಗಣಪತಿಯ ಮಾನಸಪೂಜೆ ಮಾಡುತ್ತಿರುವದು ಯೋಗ್ಯವೇ ಇದೆ. ನಿನ್ನ ಮೇಲೆ ಅವನ ಯೋಗ್ಯ ಕೃಪೆಯೂ ಇದೆ ಮತ್ತು ಅವನು ಸಕಲ ವಿಘ್ನಹರ್ತನು. ಪ್ರಕಾಶದಲ್ಲಿ ಮೂರ್ತಿಯ ಲಯವಾಗುವದು ಆ ಆ ಉಪಾಸನೆಯ ನಿರ್ಗುಣ ನಿರಾಕಾರಗಳ ದ್ಯೋತಕವಾಗಿದೆ. ಯಾವುದರಲ್ಲಿ ಮನಸ್ಸು ಹೆಚ್ಚು ತತ್ಪರವಾಗುತ್ತದೆಯೋ ಅದನ್ನು ಹೆಚ್ಚು ಮಾಡಬೇಕು. ಯಾವುದಾದರೂ ಇಷ್ಟು ಹೊತ್ತು ಎಂದು ಯಾವುದೇ ನಿರ್ಬಂಧವಿಲ್ಲ. ಮಾನಸಪೂಜೆಯಲ್ಲಿ ಹೆಚ್ಚಿನ ವೇಳೆ ಕಳೆಯುವದು ಇಷ್ಟವಾದರೆ ಹಾಗೇ ಮಾಡು.

೭. ನಿನ್ನ ಭಾವನೆಯ ಮೇಲೆ ಶ್ರೀಸಮರ್ಥರ ಮತ್ತು ನನ್ನ ಸಂಪೂರ್ಣ ಕೃಪೆ ಇದೆ. ಭಕ್ತಿಭಾವದಿಂದ ಸುಂದರ ಮೂರ್ತಿಯೇ ತಯಾರಾಗಲಿ.

೮. ಈಗ ಮಾತ್ರ ತಂದು ಕೊಟ್ಟ ನಿನ್ನ ಇಂಗ್ಲಿಷ ಪತ್ರವನ್ನೂ ಓದಿ ನೋಡಿದೆ. ಚಿ. ಲಕ್ಷೀ ನಾರಾಯಣನು ಹೇಳಿದ್ದು ನಿಜ. ಸಾಧಕರ ಪತ್ರಗಳ ಉತ್ತರ ಬಹಳಿಷ್ಟು ಕೊಡುವದಿದೆ. ಶೀರ್ಷಾಸನ ಹೆಚ್ಚೆಚ್ಚು ವೇಳೆ ಮಾಡುವದರಿಂದ ಹೆಚ್ಚು ಹೆಚ್ಚಿಗೆ ಹಸಿವೆಯಾಗುತ್ತದೆ. ಹಾಗೆ ತಿನ್ನದಿದ್ದರೆ ರಕ್ತದ ಶೋಷಣೆಯಾಗುತ್ತದೆ. ಹಸಿವೆ ಹೆಚ್ಚಾದರೆ ಅಕ್ಕಿ ಹಿಟ್ಟಿಗಿಂತ, ಗೋದಿ ಹುರಿದು ಅದರ ಹಿಟ್ಟು, ತುಪ್ಪ-ಸಕ್ಕರೆಯೊಂದಿಗೆ ತಿನ್ನಬೇಕು. ಅದಕ್ಕೂ ಹೆಚ್ಚು ಹಸಿವೆಯಾದರೆ ನುಚ್ಚಲನ್ನೇ ತುಪ್ಪ-ಸಕ್ಕರೆಯೊಂದಿಗೆ ತಿನ್ನಬೇಕು. ಮತ್ತೆಲ್ಲಾ ಸರಿಯಾಗಿದೆ. ಪೂರ್ಣ ಆಶೀರ್ವಾದವಿದೆ.

                                                 ಶ್ರೀಧರ