Home Information ಭಾರತ ಸಕಾರದ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಇನ್ಸ್’ಫೆಕ್ಟರ್, ತೆರಿಗೆ ಸಹಾಯಕ, ಬಹು ಕಾರ್ಯ...

ಭಾರತ ಸಕಾರದ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಇನ್ಸ್’ಫೆಕ್ಟರ್, ತೆರಿಗೆ ಸಹಾಯಕ, ಬಹು ಕಾರ್ಯ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ.

SHARE

ಭಾರತ ಸಕಾರದ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಇನ್ಸ್’ಫೆಕ್ಟರ್, ತೆರಿಗೆ ಸಹಾಯಕ, ಬಹು ಕಾರ್ಯ ಸಿಬ್ಬಂದಿ (ಮಲ್ಟಿ ಟಾಸ್ಕಿಂಗ್ ಸ್ಟ್ಯಾಪ್) ಹುದ್ದೆಗಳಿಗೆ ಕ್ರೀಡಾ ಕೋಟಾದಡಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 32
ಹುದ್ದೆಗಳ ವಿವರ
1.ಆದಾಯ ತೆರಿಗೆ ಇನ್ಸ್’ಫೆಕ್ಟರ್ – 07
2.ತೆರಿಗೆ ಸಹಾಯಕ – 11
3.ಬಹು ಕಾರ್ಯ ಸಿಬ್ಬಂದಿ (ಮಲ್ಟಿ ಟಾಸ್ಕಿಂಗ್ ಸ್ಟ್ಯಾಪ್) – 14
ವಿದ್ಯಾರ್ಹತೆ : ಕ್ರ.ಸಂ 1 ಮತ್ತು 2ರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಪದವಿ ಪಡೆದಿರಬೇಕು. ಕ್ರ ಸಂ 3ರ ಹುದ್ದೆಗೆ ಎಸ್.ಎಸ್.ಎಲ್.ಸಿ (ಮೆಟ್ರಿಕ್ಯುಲೇಷನ್) ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು.
ಕ್ರೀಡಾ ಕೋಟಾದ ಅರ್ಹತೆ : 2015 ರಿಂದ 2018ರ ವರೆಗಿನ ವರ್ಷದಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು.

ವಯೋಮಿತಿ : ಕನಿಷ್ಠ ವಯೋಮಿತಿ 18 ವರ್ಷ ನಿಗದಿ ಮಾಡಿದ್ದು, ಗರಿಷ್ಠ ವಯೋಮಿತಿಯನ್ನು 25 ವರ್ಷಕ್ಕೆ ನಿಗದಿ ಮಾಡಲಾಗಿದೆ. ಮಿಸಲಾತಿ ಪಡೆಯುವ ಹಿಂದುಳಿದ ವರ್ಗದವರಿಗೆ 5 ವರ್ಷ, ಪ.ಜಾ, ಪ.ಪಂ.ದವರಿಗೆ 10 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-06-2018

ಹೆಚ್ಚಿನ ಮಾಹಿತಿಗಾಗಿ www.incometaxindia.gov.in , ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.tnincometax.gov.in ಗೆ ಭೇಟಿ ನೀಡಿ.