Home Local ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ

ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ

SHARE

ಗೋಕರ್ಣ :ಪ ಪೂ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು , ಮುತ್ತಿನಕಟ್ಟೆಮಠ , ಬೆಂಗಳೂರು ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 506ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಗೋಪರಿವಾರದ ಅಧ್ಯಕ್ಷರಾದ ಗಂವ್ಹಾರ ಮಠದ ಶ್ರೀ ಶ್ರೀ ಪಾಂಡುರಂಗ ಮಹಾರಾಜ್ ಇವರು ಸಾನ್ನಿಧ್ಯ ವಹಿಸಿದ್ದರು .

ಶ್ರೀ ದೇವಾಲಯದ ಪರವಾಗಿ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .