Home Food ಗಾರ್ಲಿಕ್ ರೈಸ್

ಗಾರ್ಲಿಕ್ ರೈಸ್

SHARE

ಟೊಮೆಟೊ ರೈಸ್ ಕ್ಕಿಂತ ರುಚಿಕರ ಮತ್ತು ಆರೋಗ್ಯಕರವಾಗಿರುತ್ತೆ ಈ ಬೆಳ್ಳುಳ್ಳಿ ರೈಸ್ ಎಂದರೆ ಖಂಡಿತ ತಪ್ಪಾಗಲಾರದು. ಏಕೆಂದರೆ ಬೆಳ್ಳುಳ್ಳಿ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಬೆಳ್ಳುಳ್ಳಿಯನ್ನು ಸೇರಿಸಿದಾಗ ಆರೋಗ್ಯದ ರುಚಿ ಹೆಚ್ಚುವುದು. ಇವತ್ತು ನಾವು ರುಚಿಕರ ಮತ್ತು ಘಮ್ಮೆನ್ನುವ ಗಾರ್ಲಿಕ್ ರೈಸ್ ಮಾಡುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:
1. ಬೇಯಿಸಿದ ಅನ್ನ 2 ಕಪ್
2. ಸಿಪ್ಪೆ ಸುಲಿದು ಜಜ್ಜಿದ ಬೆಳ್ಳುಳ್ಳಿ -2 ಚಮಚ
3. ಹಸಿಮೆಣಸು 2
4. ಸ್ವಲ್ಪ ಗೋಡಂಬಿ ಮತ್ತು ಬಾದಾಮಿ
5. ಕತ್ತರಿಸದ ಕೊತ್ತಂಬರಿ ಸೊಪ್ಪು(ಸ್ವಲ್ಪ)
6. ತುಪ್ಪ -2 ಚಮಚ
7. ರುಚಿಗೆ ತಕ್ಕ ಉಪ್ಪು
8. ಕರಿಮೆಣಸಿನ ಪುಡಿ

ತಯಾರಿಸುವ ವಿಧಾನ:
1. ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಿಸಿಮಾಡಬೇಕು.
2. ಈಗ ಬೆಳ್ಳುಳ್ಳಿ ಮತ್ತು ಕತ್ತರಿಸಿದ ಮೆಣಸಿನ ಕಾಯಿಯನ್ನು ತುಪ್ಪಕ್ಕೆ ಹಾಕಬೇಕು.
3. ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗುವಾಗ ಗೋಡಂಬಿ ಮತ್ತು ಬಾದಾಮಿಯನ್ನು ಹಾಕಿ ಒಂದು ನಿಮಿಷ ಹುರಿಯಬೇಕು.
4. ಈಗ ಬೇಯಿಸಿದ ಅನ್ನವನ್ನು ಬಾಣಲೆಗೆ ಹಾಕಿ, ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಮಾಡಬೇಕು.
5. ನಂತರ ಅನ್ನವನ್ನು ಉರಿಯಿಂದ ತೆಗೆದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಗಾರ್ಲಿಕ್ ರೈಸ್ ರೆಡಿ.