Home Local 507ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ ಪೂ ಶ್ರೀ ಶ್ರೀ ಗುರುಲಿಂಗ ಸ್ವಾಮೀಜಿ

507ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ ಪೂ ಶ್ರೀ ಶ್ರೀ ಗುರುಲಿಂಗ ಸ್ವಾಮೀಜಿ

SHARE

ಗೌರವ : ಪ ಪೂ ಶ್ರೀ ಶ್ರೀ ಗುರುಲಿಂಗ ಸ್ವಾಮೀಜಿ , ಬೆಟ್ಟದಪುರಮಠ , ಮೈಸೂರು ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 507ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ಉಪಾಧಿವಂತ ಮಂಡಳದ ಸದಸ್ಯ ವೇ ರಾಮಚಂದ್ರ ಜಂಭೆ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .