Home Important ಯಡಿಯೂರಪ್ಪನವರಿಗೆ ರೈತರ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ:ಕುಮಾರಸ್ವಾಮಿ

ಯಡಿಯೂರಪ್ಪನವರಿಗೆ ರೈತರ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ:ಕುಮಾರಸ್ವಾಮಿ

SHARE

ಬೆಂಗಳೂರು : ಯಡಿಯೂರಪ್ಪನವರಿಗೆ ರೈತರ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಇಂದು ಸಭೆಗೆ ಯಡಿಯೂರಪ್ಪನವರಿಗೆ ಆಹ್ವಾನ ನೀಡಿದ್ದರೂ ಕೂಡ ಬರಲಿಲ್ಲ, ಜವಾಬ್ದಾರಿ ಸ್ಥಾನದಲ್ಲಿರುವ ಅವರು ಬರಬೇಕಿತ್ತು. ಮನೆಯಲ್ಲಿ ಕುಳಿತು ರೈತರ ಸಾಲಮನ್ನಾ ಕುರಿತು ಟ್ವೀಟ್ ಮಾಡಲು ನಿಮಗೆ ಯೋಗ್ಯತೆ ಇದೆಯಾ’ ಎಂದು ವಾಗ್ಧಾಳಿ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪ್ರವಾಹ ಪರಿಸ್ಥಿತಿ ಬಗ್ಗೆ ನಮ್ಮ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಆದರೆ ಅದೆಲ್ಲಾ ಸುಳ್ಳು ಎಂದು ಹೇಳಿದರು.