Home Special ಕನ್ಯೆಯರು ವಿವಾಹವಾಗದೇ ತೊಂದರೆಯನ್ನು ಅನುಭವಿಸುತ್ತಿದ್ದರೆ ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿ!

ಕನ್ಯೆಯರು ವಿವಾಹವಾಗದೇ ತೊಂದರೆಯನ್ನು ಅನುಭವಿಸುತ್ತಿದ್ದರೆ ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿ!

SHARE

ಭಾರತದೇಶದಲ್ಲಿರುವ ಪ್ರತಿಯೊಂದು ದೇವಾಲಯಕ್ಕೂ ಅದರದೇ ಆದ ವಿಶಿಷ್ಟತೆಗಳಿವೆ. ಕೆಲವು ಪುರಾಣ ಪ್ರಧಾನ್ಯತೆಯನ್ನು ಹೊಂದಿದ್ದರೆ, ಇನ್ನು ಕೆಲವು ಕೋರಿಕೆಗಳನ್ನು ತಿರಿಸುವ ಕಲ್ಪವೃಕ್ಷವಾಗಿರುತ್ತದೆ. ಆದರೆ ಅವುಗಳಲ್ಲಿ ಒಮ್ಮೆ ಮಾತ್ರವೇ ಪುರಾಣ ಪ್ರಧಾನ್ಯತೆಯ ಜೊತೆ-ಜೊತೆಗೆ ಭಕ್ತರು ಕೋರಿದ ಕೋರಿಕೆಗಳನ್ನು ತೀರಿಸುತ್ತಾ ಅವರ ವಿಶ್ವಾಸವನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ದಿನದಿಂದ ದಿನೇ ಆ ದೇವಾಲಯಗಳಿಗೆ ಸಂದರ್ಶಿಸುವ ಭಕ್ತರ ಸಂಖ್ಯೆಯು ಕೂಡ ಹೆಚ್ಚಾಗುತ್ತಲೇ ಇದೆ.

ಅಂತಹ ಮಹಿಮಾನ್ವಿತವಾದ ದೇವಾಲಯಕ್ಕೆ ಸಂಬಂಧಿಸಿರುವುದೇ ನವಕನ್ಯೆಯರ ದೇವಾಲಯ. ಕನ್ಯೆಯರು ವಿವಾಹವಾಗದೇ ತೊಂದರೆಯನ್ನು ಅನುಭವಿಸುತ್ತಿದ್ದರೆ ಅಂತಹವರಿಗೆ ತ್ವರಿತವಾಗಿ ವಿವಾಹ ಭಾಗ್ಯವಾಗುತ್ತದೆ ಎಂಬುದು ಅಲ್ಲಿನ ಭಕ್ತರ ಪ್ರಗಾಡವಾದ ನಂಬಿಕೆ. ಕೇವಲ ಕನ್ಯೆಯರೇ ಅಲ್ಲದೇ ವಿವಾಹ ಸಮಸ್ಯೆಗಳನ್ನು ಹೊಂದಿರುವ ಯುವಕರು ಕೂಡ ಈ ಶಕ್ತಿವಂತ ದೇವಾಲಯಕ್ಕೆ ಭೇಟಿ ನೀಡಿ ಪ್ರಯೋಜನವನ್ನು ಪಡೆದಿರುವ ನಿದರ್ಶನಗಳಿವೆಯಂತೆ. ಮುಖ್ಯವಾಗಿ 16 ಶುಕ್ರವಾರಗಳು ಈ ನವಕನ್ಯೆಯರನ್ನು ಉಪವಾಸ ಮಾಡಿ ಪೂಜಿಸಿದವರ ಕೋರಿಕೆಗಳು ತಪ್ಪದೇ ನೆರವೇರುತ್ತದೆ ಎಂದು ನಂಬಲಾಗಿದೆ.

ವಿಶೇಷವೆನೆಂದರೆ ಇಲ್ಲಿ ಶ್ರೀರಾಮಚಂದ್ರನಿಗೆ ಸಂಬಂಧಿಸಿದ ಉಗ್ರ ತತ್ವವಿದೆಯಂತೆ. ಇದರಿಂದಾಗಿಯೇ ರಾವಣನನ್ನು ಯುದ್ಧದಲ್ಲಿ ಸಂಹಾರ ಮಾಡಿದನು ಎಂದು ಪುರಾಣಗಳು ಹೇಳುತ್ತವೆ. ಇಷ್ಟು ವಿಶೇಷತೆಗಳನ್ನು ಹೊಂದಿರುವ ಈ ದೇವಾಲಯದ ಬಗ್ಗೆ ವಿವರವಾಗಿ ತಿಳಿಯಲೇಬೇಕು ಅಲ್ಲವೇ?

ಹಿಂದೂ ಪುರಾಣಗಳನ್ನು ಅನುಸರಿಸಿ ಭಾರತ ದೇಶದಲ್ಲಿ 9 ಪರಮ ಪವಿತ್ರವಾದ ನದಿಗಳು ಇವೆ. ಅವುಗಳು ಯಾವುವೆಂದರೆ ಗಂಗ, ಯಮುನ, ನರ್ಮದ, ಸರಸ್ವತಿ, ಕಾವೇರಿ, ಗೋದಾವರಿ, ಕೃಷ್ಣ, ತುಂಗಭದ್ರ, ಸರಯು. ಪ್ರಜೆಗಳು ತಾವು ಮಾಡಿದ ಪಾಪಗಳನ್ನು ತೊಲಗಿಸಿಕೊಳ್ಳುವ ಸಲುವಾಗಿ ಆ 9 ಪವಿತ್ರವಾದ ನದಿಗಳಲ್ಲಿ ಸ್ನಾನವನ್ನು ಮಾಡಿ ಆ ನದಿ ತೀರದಲ್ಲಿ ನೆಲೆಸಿರುವ ದೇವಾಲಯಗಳಲ್ಲಿ ಪೂಜೆಗಳನ್ನು ನೇರವೇರಿಸುವುದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ.

ಇದರಿಂದಾಗಿ ಆ ಪ್ರಜೆಗಳ ಪಾಪಗಳು ತೊಲಗುತ್ತವೆ. ಆದರೆ ಆ ಪಾಪವೆಲ್ಲಾ ಆ ನದಿಯಲ್ಲಿನ ದೇವಿಯರಿಗೆ ಅಂಟುಕೊಳ್ಳುತ್ತವೆ. ಹೀಗಾಗಿ ಆ 9 ನದಿಯ ದೇವಿಯರು ತಮಗೆ ಅಂಟಿರುವ ಜನರ ಪಾಪಗಳನ್ನು ನಾಶಗೊಳಿಸುವ ಉಪಾಯವನ್ನು ಸೂಚಿಸು ಎಂದು ಕಾಶಿಯಲ್ಲಿನ ವಿಶ್ವೇಶ್ವರನಲ್ಲಿ ಪ್ರಾರ್ಥಿಸುತ್ತಾರೆ.

ಇದರಿಂದಾಗಿ ಆ ಪರಮಶಿವನು ಅವರಿಗೆ ಪ್ರತ್ಯಕ್ಷವಾಗಿ ಕುಂಭಕೋಣಂನಲ್ಲಿನ ಮಹಾಮಹಾಂ ಎಂಬ ಹೆಸರಿನಿಂದ ಕರೆಯಲಾಗುವ ಪುಷ್ಕರಣಿಯಲ್ಲಿ 12 ವರ್ಷಕ್ಕೆ ಒಮ್ಮೆ ಮಹಾಕುಂಭದ ಸಮಯದಲ್ಲಿ ಸ್ನಾನವನ್ನು ಆಚರಿಸಿ, ಅಲ್ಲಿಯೇ ಇರುವ ಆದಿಕುಂಭೇಶ್ವರನನ್ನು ಪೂಜಿಸಿದರೆ ನಿಮ್ಮ ಪಾಪವೆಲ್ಲಾ ತೊಲಗಿ ಪುನೀತರಾಗುತ್ತೀರಾ ಎಂದು ಹೇಳುತ್ತಾನೆ.

ಇದರಿಂದಾಗಿ ಆ 9 ಮಂದಿ ದೇವಿಯರು ಕುಂಭಕೋಣಂ ಸೇರಿಕೊಂಡು ಮಹಾಕುಂಭ ಸಮಯದಲ್ಲಿ ಮಹಾಮಹಾದ ಪುಷ್ಕರಣಿಯಲ್ಲಿ ಸ್ನಾನವನ್ನು ಮಾಡುತ್ತಾರೆ. ತದನಂತರ “ನವಕನ್ಯೆ” ಯರ ರೂಪದಲ್ಲಿ ಈ ಸ್ಥಳದಲ್ಲಿಯೇ ನೆಲೆಸುತ್ತಾರೆ. ಅಷ್ಟೇ ಅಲ್ಲದೇ, ಆ ಪುಷ್ಕರಣಿಯಲ್ಲಿ ಸ್ನಾನವನ್ನು ಮಾಡಲು ಹಾಗು ಅಲ್ಲಿಯೇ ನೆಲೆಸಲು ಸಹಾಯವನ್ನು ಮಾಡಬೇಕು ಎಂದು ಪರಮಶಿವನನ್ನು ಪ್ರಾರ್ಥಿಸಿದರಂತೆ.

ಇದರಿಂದಾಗಿ ಆ ಪರಮಶಿವನು ನವಕನ್ಯೆಯರ ಜೊತೆ-ಜೊತೆಗೆ ಅಲ್ಲಿಯೇ ನೆಲೆಸಿದನಂತೆ. ಹಾಗಾಗಿಯೇ ಇಲ್ಲಿರುವ ಸ್ವಾಮಿಯನ್ನು ಕಾಶಿವಿಶ್ವನಾಥ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಪರಮಶಿವನ ಜೊತೆಜೊತೆಗೆ ವಿಶಾಲಾಕ್ಷಿ ಎಂಬ ಹೆಸರಿನಿಂದ ಪಾರ್ವತಿ ದೇವಿಯನ್ನು ಆರಾಧಿಸುತ್ತಾರೆ.

ಇನ್ನು ಆ 9 ಮಂದಿ ನದಿಗಳು ಎಂದರೆ ನವ ಕನ್ಯೆಯರು 12 ವರ್ಷಕ್ಕೆ ಒಮ್ಮೆ ಕುಂಭಕೋಣಂಗೆ ಭೇಟಿ ನೀಡಿ ಈ ಪುಣ್ಯಸ್ಥಳದಲ್ಲಿ ಸ್ನಾನವನ್ನು ಆಚರಿಸುತ್ತಾರೆ ಎಂದು ನಂಬಲಾಗಿದೆ. ಆ ಸಮಯದಲ್ಲಿ ಆ ಮಹಾಮಹಾದಲ್ಲಿ ಸ್ನಾನವನ್ನು ಮಾಡಿದರೆ ದೇಶದಲ್ಲಿನ 9 ನದಿಗಳಲ್ಲಿ ಸ್ನಾನ ಮಾಡಿದ ಪುಣ್ಯದ ಫಲ ದೊರೆಯುತ್ತದೆ ಎಂಬುದು ಭಕ್ತರ ಪ್ರಗಾಡವಾದ ನಂಬಿಕೆಯಾಗಿದೆ.

ಹಾಗಾಗಿಯೇ ಆ ಸಮಯದಲ್ಲಿ ಈ ಮಹಾಮಹಾದಲ್ಲಿ ಸ್ನಾನವನ್ನು ಮಾಡುವ ಸಲುವಾಗಿ ಲಕ್ಷಾದಿಮಂದಿ ಭಕ್ತರು ಈ ಪವಿತ್ರವಾದ ಸ್ಥಳಕ್ಕೆ ಸೇರಿಕೊಳ್ಳುತ್ತಾರೆ. ಈ 9 ಮಂದಿ ನದಿಯ ದೇವಿಗಳಿಗ ಜೊತೆಗೆ ಕಾಶಿನಾಥನನ್ನು ದೇವಾಲಯದಲ್ಲಿ ವಿಗ್ರಹದ ರೂಪದಲ್ಲಿ ಪೂಜಿಸುತ್ತಾರೆ.

ಹೆಣ್ಣು ಮಕ್ಕಳ ವಯಸ್ಸು ಹೆಚ್ಚಾಗುತ್ತಾ ಹೋದರು ವಿವಾಹ ಭಾಗ್ಯ ಇಲ್ಲದೇ ತೊಂದರೆ ಅನುಭವಿಸುತ್ತಿರುವವರು ಈ ನವಕನ್ಯೆಯನ್ನು ಪೂಜಿಸಿದರೆ ಶೀಘ್ರವಾಗಿ ವಿವಾಹವಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಇವರೇ ಅಲ್ಲದೇ ವಿವಾಹ ಸಮಸ್ಯೆಗಳನ್ನು ಹೊಂದಿರುವ ಯುವಕರು ಕೂಡ ಈ ಶಕ್ತಿವಂತ ದೇವಾಲಯಕ್ಕೆ ಭೇಟಿ ನೀಡಿ ಪ್ರಯೋಜನವನ್ನು ಪಡೆದಿರುವ ನಿದರ್ಶನಗಳಿವೆಯಂತೆ.

ಮುಖ್ಯವಾಗಿ 16 ಶುಕ್ರವಾರಗಳು ಈ ನವಕನ್ಯೆಯರನ್ನು ಉಪವಾಸ ಮಾಡಿ ಪೂಜಿಸಿದವರ ಕೋರಿಕೆಗಳು ತಪ್ಪದೇ ನೆರವೇರುತ್ತದೆ ಎಂದು ನಂಬಲಾಗಿದೆ. ಹಾಗಾಗಿಯೇ ಉಳಿದ ದಿನಗಳಿಗೆ ಹೋಲಿಸಿದರೆ ಶುಕ್ರವಾರದಂದು ಈ ದೇವಾಲಯದಲ್ಲಿ ವಿವಾಹವಾಗದೇ ಇರುವ ಕನ್ಯೆಯರು ಹೆಚ್ಚಾಗಿ ನವ ಕನ್ಯೆಯರನ್ನು ಅತ್ಯಂತ ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದನ್ನು ಕಾಣಬಹುದು.

ಇಷ್ಟೇ ಅಲ್ಲ, ಶ್ರೀರಾಮನು ತನ್ನ ಸಾತ್ವಿಕ ಗುಣವನ್ನು ಬಿಟ್ಟು, ಸ್ವಲ್ಪ ಉಗ್ರ ತತ್ವವನ್ನು ಹೊಂದುವ ಸಲುವಾಗಿ ಇಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಿ ಪೂಜಿಸಿದನು ಎಂದು ಹೇಳುತ್ತಾರೆ. ಇದಕ್ಕೆ ಸಂಬಂಧಿಸಿದ ಪುರಾಣ ಕಥೆಯ ಪ್ರಕಾರ ಸತ್ಯ ಅನ್ವೇಷಣೆ ಮಾಡುತ್ತಾ ಶ್ರೀ ರಾಮನು, ಲಕ್ಷ್ಮಣನ ಜೊತೆ ಕುಂಭಕೋಣಕ್ಕೆ ಭೇಟಿ ನೀಡುತ್ತಾರೆ.

ಕುಂಭಕೋಣಂ ರೈಲ್ವೆ ನಿಲ್ದಾಣವು ನಗರದ ಹೃದಯಭಾಗದಲ್ಲಿದೆ. ಕುಂಭಕೋಣಂ ಮತ್ತು ಚೆನ್ನೈ ನಡುವೆ ಹಲವಾರು ರೈಲುಗಳು ಚಾಲನೆಯಲ್ಲಿವೆ. ರಾಮೇಶ್ವರಂ, ತಿರುಪತಿ, ಕೊಲ್ಲಂಗಳಿಗೂ ಕೂಡ ರೈಲ್ವೆ ಸಂಪರ್ಕ ಸಾಧಿಸುತ್ತವೆ. ತಿರುಚ್ಚಿ ವಿಮಾನ ನಿಲ್ದಾಣವು ಕುಂಭಕೋಣಂಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಕೇವಲ ತಿರುಚ್ಚಿಯಿಂದ 96 ಕಿ.ಮೀ ದೂರದಲ್ಲಿದೆ.