Home Information ವಿದ್ಯಾರ್ಥಿ ವೇತನ ಕಾರ್ಯಕ್ರಮ: ವಿದ್ಯಾಧಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ

ವಿದ್ಯಾರ್ಥಿ ವೇತನ ಕಾರ್ಯಕ್ರಮ: ವಿದ್ಯಾಧಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ

SHARE

ಹೊನ್ನಾವರ: ಎಸ್.ಬಿ.ಶಿಬುಲಾಲ್ (ಸಹ ಸಂಸ್ಥಾಪಕರು ಇನ್‍ಪೋಸಿಸ್) ಮತ್ತು ಶಿಬುಲಾಲ್ (ಪೋಷಕರು) ಸ್ಥಾಪಿಸಿರುವ ಸರೋಜನಿ ದಾಮೋದರ ಪೌಂಡೇಶನ್ ತನ್ನ ವಿದ್ಯಾರ್ಥಿ ವೇತನ ಕಾರ್ಯಕ್ರಮ ವಿದ್ಯಾಧಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ವಿದ್ಯಾರ್ಥಿ ವೇತನವು 2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.

ವಿದ್ಯಾರ್ಥಿಯು 2018 ರ SSLC ಪರೀಕ್ಷೆಯನ್ನು ಕರ್ನಾಟಕದಲ್ಲಿ 90% (ಅಂಗವಿಕಲರಾಗಿದ್ದಲ್ಲಿ 75%) ಕ್ಕಿಂತಲೂ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಥವಾ ಎಲ್ಲಾ ವಿಷಯಗಳಲ್ಲಿ ಎ+ ಶ್ರೇಣಿ ಹೊಂದಿರಬೇಕು. ಅಂತಹ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ www.vidyadhan.org ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-06-2018. ಪೌಂಡೆಶನ್ ಆಯ್ಕೆ ಮಾಡುವ ಅರ್ಹ ವಿದ್ಯಾರ್ಥಿಗಳಿಗೆ 2 ವರ್ಷಗಳ ವಿದ್ಯಾರ್ಥಿ ವೇತನ ನೀಡಲಾಗುವುದು.

ವಿದ್ಯಾರ್ಥಿ ಮುಂದೆಯೂ ಉತ್ತಮ ಪ್ರದರ್ಶನ ನೀಡಿದಲ್ಲಿ ಆತನ ಆಸಕ್ತಿಯ ಪದವಿ ತರಗತಿಗಳಿಗೂ ವಿದ್ಯಾರ್ಥಿ ವೇತನ ಮುಂದುವರೆಸಲಾಗುವುದು. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಈಮೇಲ್ vidyadhan.karnataka@sdfoundationindia.com ಅಥವಾ ಶ್ರೀ ವಿಶ್ವನಾಥ ಫೋ.ನಂ-9986325234/8296010803 ಇವರನ್ನು ಸಂಪರ್ಕಿಸಬಹುದು