Home Local ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಸೋಲಿನ ಕುರಿತು ಆತ್ಮಾವಲೋಕನಾ ಸಭೆ

ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಸೋಲಿನ ಕುರಿತು ಆತ್ಮಾವಲೋಕನಾ ಸಭೆ

SHARE

ಕುಮಟಾ: ಹವ್ಯಕ ಸಭಾಭವನ ಕುಮಟಾದಲ್ಲಿ ಕಳೆದ 2018 ರ ವಿಧಾನಸಭಾ ಚುನಾವಣೆಯ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ಸೇರಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಜಗದೀಪ ತೆಂಗೇರಿ, ವಿ ಎಲ್ ನಾಯ್ಕ, ಜಿ ಪಂ ಸದಸ್ಯರಾದ ಶಿವಾನಂದ ಹೆಗಡೆ, ರತ್ನಾಕರ ನಾಯ್ಕ, ಮುಖಂಡರಾದ ಮಧುಸೂದನ ಶೆಟ್ಟಿ, ರವಿಕುಮಾರ್ ಮೋಹನ್ ಶೆಟ್ಟಿ, ತಾರಾ ಗೌಡ, ಸುರೇಖಾ ವಾರೇಕರ,ಮುಂತಾದವರು ಉಪಸ್ಥಿತರಿದ್ದರು. ದಾಮೋದರ ನಾಯ್ಕ, ಎಸ್ ಎಮ್ ಭಟ್ಟ ಇವರು ತಮ್ಮ ಅನಿಸಿಕೆಗಳನ್ನು ಹೇಳಿದರು.