Home Local ಕೊಂಕಣ ಎಜ್ಯುಕೇಶನ್ ಟ್ರಸ್ಟ ಅಧ್ಯಕ್ಷರಾಗಿದ್ದ ಕಾಶೀನಾಥ ನಾಯಕ ಇನ್ನಿಲ್ಲ!

ಕೊಂಕಣ ಎಜ್ಯುಕೇಶನ್ ಟ್ರಸ್ಟ ಅಧ್ಯಕ್ಷರಾಗಿದ್ದ ಕಾಶೀನಾಥ ನಾಯಕ ಇನ್ನಿಲ್ಲ!

SHARE

ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ(ರಿ)ನ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಹಿರಿಯ ಚೇತನ ಶ್ರೀಯುತ ಕಾಶಿನಾಥ ನಾಯಕ ರವರು ದಿನಾಂಕ ೦೨/೦೬/೨೦೧೮ ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಸರಳ ಜೀವಿ, ಶಿಕ್ಷಣ ಪ್ರೇಮಿ, ಉದ್ಯಮಿಯಾಗಿ ಛಾಪು ಮೂಡಿಸಿದ್ದ ಉತ್ಸಾಹದ ವ್ಯಕ್ತಿಯಾಗಿದ್ದ ಶ್ರೀಯುತರ ಅಗಲುವಿಕೆ ಆಘಾತವನ್ನು ಉಂಟುಮಾಡಿದೆ.

ಏತನ್ಮಧ್ಯೆ ಕೊಂಕಣ ಎಜ್ಯುಕೇಶನ್ ಟ್ರಸ್ಟನಲ್ಲಿ ದಿನಾಂಕ ೦3/06/2017 ರವಿವಾರ ನಡೆಯಬೇಕಿದ್ದ ಕಾಲೇಜಿನ ಕಟ್ಟಡ ಉದ್ಘಾಟನೆಯ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.

ಭಾವಪೂರ್ಣ ಶೃದ್ಧಾಂಜಲಿ

ಸರಳ ಜೀವಿ, ಶಿಕ್ಷಣ ಪ್ರೇಮಿ, ಉದ್ಯಮಿ, ಮಾರ್ಗದರ್ಶಕರಾಗಿ ಹಾಗೂ
ನಮ್ಮ ಕೊಂಕಣ ಎಜ್ಯುಕೇಶನ್ ಟ್ರಸ್ಟ(ರಿ)ನ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಹಿರಿಯ ಚೇತನ ಶ್ರೀಯುತ ಕಾಶಿನಾಥ ನಾಯಕ ರವರು ದಿನಾಂಕ ೦೨/೦೬/೨೦೧೮ ಶನಿವಾರ ರಾತ್ರಿ ನಮ್ಮೆಲ್ಲರನ್ನೂ ಅಗಲಿದ್ದು ಅತೀವ ದುಃಖವನ್ನುಂಟುಮಾಡಿದೆ.

ಪೂಜ್ಯರ ಆತ್ಮಕ್ಕೆ ಚಿರ ಶಾಂತಿ ಕೋರುತ್ತಾ ,ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

ಆಡಳಿತ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು,ಸಹ ಕಾರ್ಯದರ್ಶಿಗಳು, ಹಾಗೂ ಎಲ್ಲ ವಿಶ್ವಸ್ಥರು, ಅಂಗ ಸಂಸ್ಥೆಗಳ ಮುಖ್ಯ ಶಿಕ್ಷಕರು, ಶಿಕ್ಷಕ, ಶಿಕ್ಷಕೇತರ ವರ್ಗದವರು. ಕೊಂಕಣ ಎಜ್ಯುಕೇಶನ್ ಟ್ರಸ್ಟ(ರಿ) ವಿದ್ಯಾಗಿರಿ,ಕಲಭಾಗ ಕುಮಟಾ.