Home Local ಕೆನರಾ ಎಕ್ಸಲೆನ್ಸ್ ಕೋಚಿಂಗ್ ಸೆಂಟರ್ ನ ಉತ್ತಮ ಸಾಧನೆ.

ಕೆನರಾ ಎಕ್ಸಲೆನ್ಸ್ ಕೋಚಿಂಗ್ ಸೆಂಟರ್ ನ ಉತ್ತಮ ಸಾಧನೆ.

SHARE

ಕುಮಟಾದಲ್ಲಿ ದಿ. ಜಿ ಎನ್ ಹೆಗಡೆ ಟ್ರಸ್ಟ್ ನಿಂದ ಪ್ರಾರಂಭಿಸಲಾದ ಕೆನರಾ ಎಕ್ಸಲೆನ್ಸ್ ಕೋಚಿಂಗ್ ಸೆಂಟರ್ ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದೆ.

ಮೊದಲ ಬ್ಯಾಚ್ ನ ಪಿ ಯು ಸಿ ವಿದ್ಯಾರ್ಥಿಗಳಲ್ಲಿ *ಚಿನ್ಮಯಿ – PCM 100/100 ಹಾಗೂ CET – 714 ರಾಮದಾಸ ಕಾಮತ – PCM – 99.3 /100 ಹಾಗೂ CET – 618, Bsc Agri – 155* ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಉಳಿದ 3 ವಿದ್ಯಾರ್ಥಿಗಳು 95% ಕ್ಕಿಂತಲೂ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ್ದಾರೆ.. ಮೊದಲ ಬ್ಯಾಚ್ ನಲ್ಲಿ 20 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ . *ಎಲ್ಲ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಟ್ರಸ್ಟ್ ನ ಕೋಚಿಂಗ್ ಸೆಂಟರ್ ನ ಅಧ್ಯಕ್ಷ ಡಾ. ಜಿ ಜಿ ಹೆಗಡೆ ಹಾಗೂ ಇತರ ಪ್ರಮುಖರು ಶುಭಹಾರೈಸಿದ್ದಾರೆ.

ಈಗ ಎರಡನೇ ಬ್ಯಾಚ್ ಪ್ರಗತಿಯಲ್ಲಿದ್ದು ಇದರಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.. ಉತ್ತಮ ನುರಿತ ತರಬೇತುದಾರರನ್ನು ಈ ಕೊಂಚಿಂಗ್ ಸೆಂಟರ್ ಹೊಂದಿದ್ದು ಸ್ಥಳೀಯವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ತರಬೇತಿ ವಿದ್ಯಾರ್ಥಿಗಳಿಗೆ ಸಿಗಲಿ ಎನ್ನುವ ಉದ್ದೇಶ ಈ ಕೋಚಿಂಗ್ ಸೆಂಟರ್ ಹೊಂದಿದೆ.

ಮೂರನೇ ಬ್ಯಾಚ್ ಜುಲೈ 1 ರಿಂದ ಡಾ. ಎ ವಿ ಬಾಳಿಗಾ ಮಹಾವಿದ್ಯಾಲಯದಲ್ಲಿ ಪ್ರಾರಂಭವಾಗಲಿದೆ . ಕರಾವಳಿಯ ಎಲ್ಲ ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎನ್ನುವ ಕಾರಣಕ್ಕೆ ಕುಮಟಾದಲ್ಲಿ ಪ್ರಾರಂಭಿಸಲಾದ ಈ ಕೋಚಿಂಗ್ ಸೆಂಟರ್ ಸೇರಲಿಚ್ಛಿಸುವ ವಿದ್ಯಾರ್ಥಿಗಳು ಕೂಡಲೇ ತಮ್ಮ ಹೆಸರು ನೊಂದಾಯಿಸಬಹುದಾಗಿದೆ..