Home Local ದಿವಂಗತ ಮಹಾದೇವ ಮಾಸ್ತರ ಮದ್ಗುಣಿಯವರ ಜನ್ಮ ಶತಮಾನೋತ್ಸವ.

ದಿವಂಗತ ಮಹಾದೇವ ಮಾಸ್ತರ ಮದ್ಗುಣಿಯವರ ಜನ್ಮ ಶತಮಾನೋತ್ಸವ.

SHARE

ಕುಮಟಾ: ದಿವಂಗತ ಮಹದೇವ ಮಾಸ್ತರ ಮದ್ಗುಣಿಯವರ ಜನ್ಮ ಶತಮಾನೋತ್ಸವ ಸಮಾರಂಭವು ಇಂದು ಕುಮಟಾದ ಹವ್ಯಕ ಸಭಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಗಣ್ಯರು ಉದ್ಘಾಟಿಸಿದರು.

ಸಭಾ ಮಂದಿರದಲ್ಲಿ ಕಿಕ್ಕಿರಿದು ಸೇರಿದ ಸಭೆಯ ವೇದಿಕೆಯಲ್ಲಿ ಇವರ ಪರಮಾಪ್ತ ಶಿಷ್ಯರಾಗಿದ್ದ ಶ್ರೀಯುತ ಜಿ.ಎಸ್.ಭಟ್ಟ ನಡಗೋಡ ರವರು ತಮ್ಮ ಹೃದಯಾಂತರಾಳದಿಂದ ಅಂದಿನ ಗುರು ಶಿಷ್ಯರ ಸಂಬಂಧವನ್ನ ಹಾಗೂ ತಾವು ತಮ್ಮ ಪೂಜ್ಯ ಗುರುಗಳೊಂದಿಗೆ ಹೊಂದಿದ್ದ ಅಂದಿನ ಒಡನಾಟದ ಅನುಭವವನ್ನು ಘಟನಾವಳಿಗಳ ಸಹಿತ ವಿವರಿಸುತ್ತ ತಮ್ಮ ನುಡಿ ನಮನ ಸಲ್ಲಿಸಿದರು.

ವೇದಿಕೆಯಲ್ಲಿ ಹಿರಿಯರಾದ ನರಸಿಂಹ ಭಟ್ಟ ನಡಗೋಡರವರು “ದಿವ್ಯ ಚೇತನ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಕೃಷ್ಣ ಗುರೂಜಿ ಯವರು ಮಾದೇವ ವೆಂ.ಭಟ್ಟ ರವರು ಸಂಗ್ರಹಿಸಿದ್ದ ಗಿಡಮೂಲಿಕೆ ಸಸ್ಯ ಪ್ರಬೇಧಗಳ ಮಾಹಿತಿ ಹೊಂದಿರುವ “ಸಸ್ಯ ಸಂಜೀವಿನಿ” ಪುಸ್ತಕ ಬಿಡುಗಡೆಗೊಳಿಸಿದರು.
‘ದಿವ್ಯ ಚೇತನ’ ದ ಸಂಪಾದಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದ ಸಾಹಿತಿ ಡಾ.ಚಿಂತಾಮಣಿ ಕೊಡ್ಲೆಕೇರಿ ಸಾಂದರ್ಭಿಕ ಮಾತನಾಡಿದರು.ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ ವೈದ್ಯ, ಲೇಖಕ ಟಿ.ಎಸ್.ಗೋಪಾಲ,ಹಾಗೂ ಮದ್ಗುಣಿ ಮಾಸ್ತರರವರ ಪುತ್ರರಾದ ಜಿ.ಎಮ್.ಭಟ್ಟ್,ರಾಮಕೃಷ್ಣ ಭಟ್ಟ,ಎಸ್.ಎಮ್.ಭಟ್ಟ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕ, ಆದರ್ಶ ಪುರೋಹಿತ, ಗೋ ಬಂಧು, ಗ್ರಹಲಕ್ಷ್ಮಿ, ಧನ್ವಂತರಿ, ಶ್ರಮಜೀವಿ ವಿಭಾದವರಿಗೆ ಸನ್ಮಾನ ಮಾಡಲಾಯಿತು. ಮತ್ತು ತಾಳಬ್ರಹ್ಮ ಮಾದೇವ ಮಾಸ್ತರ ಟ್ರೋಫಿ ವಿತರಿಸಲಾಯಿತು.

ಮಹಾದೇವ ಮಾಸ್ತರ ಮದ್ಗುಣಿಯವರ ಕುಟುಂಬಸ್ತರು ಹಾಗೂ ಆಪ್ತೇಷ್ಟರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷವಾಗಿ ಮೂಡಿಬಂತು.