Home Local ದಿ. ಕಾಶೀನಾಥ ನಾಯಕರಿಗೆ ಶ್ರದ್ಧಾಂಜಲಿ : ಸಂದಿತು ನುಡಿ ನಮನ

ದಿ. ಕಾಶೀನಾಥ ನಾಯಕರಿಗೆ ಶ್ರದ್ಧಾಂಜಲಿ : ಸಂದಿತು ನುಡಿ ನಮನ

SHARE

ಕುಮಟಾ:ಕೊಂಕಣಎಜ್ಯುಕೇಶನ್‍ಟ್ರಸ್ಟ್‍ನಅಧ್ಯಕ್ಷರಾಗಿದ್ದ ದಿ.ಕಾಶೀನಾಥ ನಾಯಕರವರ ಸಂಸ್ಮರಣೆಕಾರ್ಯಕ್ರಮಟ್ರಸ್ಟ್‍ನಆಶ್ರಯದಲ್ಲಿಜರುಗಿತು. ದಿ.ಕಾಶೀನಾಥ ನಾಯಕರವರ ಹಿತೈಷಿಗಳು, ಸಂಬಂಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು, ನುಡಿನಮನ-ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದಡಾ||ಜಿ.ಜಿ.ಹೆಗಡೆ, ದಿ.ಕಾಶೀನಾಥ ನಾಯಕರವರಆತ್ಮೀಯಒಡನಾಟವನ್ನು ಸಭೆಗೆ ಹೇಳುತ್ತಾ, ಅತ್ಯುತ್ತಮತತ್ವಜ್ಞಾನಿ, ಅತ್ಯುತ್ತಮ ಸಮಾಜ ಸೇವಕ ಇಂದು ನಮ್ಮ ಪಾಲಿಗಿಲ್ಲಎಂಬುದೇಅತೀವ ನೋವು ತಂದಿದೆಎಂದರು. ಶ್ರೀ ಸುರೇಶ ಭಟ್ಟ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ರೋಟರಿಯೊಂದಿಗೆತಮ್ಮಒಡನಾಟದಲ್ಲಿದ್ದ ಕಾಶೀನಾಥ ನಾಯಕರವರಿಗೆ ನುಡಿನಮನ ಸಲ್ಲಿಸಿದರು.

ಕೊಂಕಣಿಅಕಾಡೆಮಿಯ ಶ್ರೀ ಅರುಣಉಭಯಕರ ಮಾತನಾಡಿ, ಅತ್ಯುತ್ತಮ ಸಂಘಟಕ, ಅತ್ಯುತ್ತಮ ಮಾರ್ಗದರ್ಶಕರನ್ನುಕರೆದುಕೊಂಡ ನೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾದ ಅನಿವಾರ್ಯತೆಎದುರಾಗಿರುವುದು ನನಗೆ ಆಘಾತತಂದಿದೆಎನ್ನುತ್ತಾಗದ್ಗದಿತರಾದರು.

ಸರಸ್ವತಿ ಪಿ.ಯುಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಲೋಚನಾ ರಾವ್, ಶೈಕ್ಷಣಿಕ ಸಲಹೆಗಾರರಾದ ಶ್ರೀ ಆರ್.ಎಚ್.ದೇಶಭಂಡಾರಿ, ಶಿಕ್ಷಕ ಗಣೇಶ ಜೋಶಿ, ಶಿವಾನಂದ ಭಟ್ಟ ಮಾತನಾಡಿದರು. ಆದಿಚುಂಚನಗಿರಿ ಸಂಸ್ಥೆಯ ಕಾರ್ಯದರ್ಶಿ ವಿಷ್ಣು ಪಟಗಾರ ಮಾತನಾಡಿ, ಕುಮಟಾದಅತ್ಯುತ್ತಮಎಂಜಿನಿಯರ್‍ಎಂದರೆ ಕಾಶೀನಾಥ ನಾಯಕರವರುಎನ್ನುತ್ತಾಅವರ ಬಾಲ್ಯ ಹಾಗೂ ಅವರ ವೃತ್ತಿಜೀವನದ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು.

ವ್ಯಕ್ತಿಯಾವರೀತಿ ಬದುಕಿದರು, ಯಾವ ವಿಷಯವನ್ನು ಕಲಿಸಿದರು, ಅವರ ಬದುಕಿನಲ್ಲಿ ನಾವು ಕಲಿಯಬೇಕಾಗಿದ್ದುಏನು ಎಂಬುದನ್ನು ತಿಳಿದು ಬದುಕುವುದೇ ನಿಜವಾದ ಶ್ರದ್ಧಾಂಜಲಿ ಎಂಬುದಾಗಿ ತಿಳಿಸಿ ಕಾಶೀನಾಥ ನಾಯಕರವರ ಜೀವನಾದರ್ಶಗಳನ್ನು ಹಾಗೂ ಕೊಂಕಣಎಜ್ಯುಕೇಶನ್‍ಟ್ರಸ್ಟ್‍ಜೊತೆಗಿನಅವರಒಡನಾಟವನ್ನು ನೆನೆಸಿ ವಿಶ್ವಸ್ಥರಾದರಮೇಶ ಪ್ರಭು ನುಡಿನಮನ ಸಲ್ಲಿಸಿದರು.

ಹುಟ್ಟು ಆಕಸ್ಮಿಕ ಹಾಗೂ ಸಾವು ಅನಿವಾರ್ಯ ಎಂಬ ಮಾತಿದೆ. ಆದರೆ, ಈ ಸಾವು ಆಘಾತತಂದಿದೆ. ಶ್ರೀ ಕಾಶೀನಾಥ ನಾಯಕ ನುಡಿದಂತೆ ನಡೆದವರು, ನಡೆದಂತೆ ನುಡಿದವರುಎನ್ನುತ್ತಾ, 1975 ರಿಂದಆತ್ಮೀಯಒಡನಾಟ ಹೊಂದಿದ ದಿನಗಳನ್ನು ಕೊಂಕಣಎಜ್ಯುಕೇಶನ್‍ಟ್ರಸ್ಟ್‍ನ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು ನೆನೆಸಿದರು. ಪ್ರತಿಯೊಂದೂಕಾರ್ಯದಲ್ಲಿಅವರನ್ನುಅನುಸರಿಸಬಹುದು. ಊಟದ ಸವಿಯನ್ನು ಸವಿಯುವಾಗಲೂ ಸಹಅವರುಅದರ ಪ್ರತೀಕ್ಷಣವನ್ನು ಆನಂದಿಸುತ್ತಿದ್ದರು. ಸಂಸ್ಥೆಯ ಕಾರ್ಯದರ್ಶಿಯಾಗಿ ಅವರನ್ನು ಭೇಟಿಮಾಡುತ್ತಿದ್ದೆ. ಸಂಸ್ಥೆಯಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಹಿರಿಯಚೇತನ ನಮ್ಮನ್ನುಅಗಲಿದ್ದಾರೆಎಂಬುದು ಮನಸ್ಸಿಗೆ ಅತೀವ ನೋವು ತಂದಿದೆಎಂದರು. ರಾಜ ಅಳಿದರೂ ರಾಜತ್ವ ಮುಂದುವರಿಯಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದ ಕಾಶೀನಾಥ ನಾಯಕರವರು ನಮ್ಮಜೊತೆಗಿದ್ದು, ಯಾವಾಗಲೂ ಹರಸುತ್ತಾರೆಎಂಬುದನ್ನು ಆಶಿಸುತ್ತ ಕಾರ್ಯಕ್ರಮ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿಜಂಟಿ ಕಾರ್ಯದರ್ಶಿಗಳಾದ ಶೇಷಗಿರಿ ಶಾನಭಾಗ, ವಿಶ್ವಸ್ಥರಾದಡಿ.ಡಿ.ಕಾಮತ, ದಾಸಾ ಶಾನಭಾಗ, ರಾಮನಾಥಕಿಣಿ, ನಾಗೇಶ ಶಾನಭಾಗ, ಬೀರಣ್ಣ ನಾಯಕ, ಡಾ. ವೆಂಕಟೇಶ ಶಾನಭಾಗ, ಸಂಸ್ಥೆಯ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.