Home Important ಸಪ್ತಮ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ವು ಉತ್ಸಾಹದಿಂದ ಆರಂಭ !

ಸಪ್ತಮ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ವು ಉತ್ಸಾಹದಿಂದ ಆರಂಭ !

SHARE

ರಾಮನಾಥಿ (ಗೋವಾ) – ಸಂತರು, ಋಷಿಗಳು, ವೇದಗಳು, ಪುರಾಣಗಳಿಂದ ಅದೇ ರೀತಿ ಭಗವಾನ ಶಿವನ ಸಂಕಲ್ಪದಿಂದ ಹಿಂದೂ ರಾಷ್ಟ್ರ ಆಗಿಯೇ ಆಗುತ್ತದೆ. ನಮ್ಮ ಸಂಸ್ಕೃತಿ ವೇದಗಳನ್ನು ಮುಂದೆ ತೆಗೆದುಕೊಂಡು ಹೋಗುತ್ತಿರುವಾಗ ವೇದಗಳ ಹಿಂದೆ ಕ್ಷಾತ್ರತೇಜವೂ ಇದೆ. ಇಂದು ಇತರ ಪಂಥದವರು ತಮ್ಮ ಧರ್ಮವನ್ನು ನಂಬುತ್ತಾರೆ; ಆದರೆ ಹಿಂದೂಗಳು ಮಾತ್ರ ಸ್ವಧರ್ಮವನ್ನು ನಂಬುವುದಿಲ್ಲ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳ ಚಿಂತನೆ ಹಾಗೂ ಆತ್ಮಮಂಥನವಾಗಿ ಅವರಲ್ಲಿ ಬೌದ್ಧಿಕವಾಗಿ ಸುಸ್ಪಷ್ಟತೆಯು ಬರಬೇಕಾಗಿದೆ. ಅದಕ್ಕಾಗಿ ಧರ್ಮದ ಬಗ್ಗೆ ಪರಿಕಲ್ಪನೆ ಸ್ಪಷ್ಟ ಇರುವುದು ಅವಶ್ಯಕವಿದೆ. ಇಂದು ದೇಶದಲ್ಲಿಯ ಹಿಂದೂಗಳು ಕೂಪಮಂಡುಕ (ಭಾವಿಯೊಳಗಿನ ಕಪ್ಪೆ) ರಾಗಿದ್ದಾರೆ ಇನ್ನೊಂದು ಕಡೆ ಮಹಿಳೆಯರ ಮೇಲೆ ದೌರ್ಜನ್ಯಗಳಾಗುತ್ತಿದೆ. ಸದ್ಯ ನಾಲ್ಕೂ ದಿಕ್ಕಿನಲ್ಲಿಯೂ ಬೆಂಕಿ ಹೊತ್ತಿಕೊಂಡಿದ್ದು ಮಹಿಳೆಯರು ಝಾನ್ಸಿ ರಾಣಿಯಂತೆ ಕೃತಿಶೀಲರಾಗಿ ಮುಂದೆ ಬರಬೇಕಾಗಿದೆ. ದೇಶದ ಆಂತರಿಕ ಹಾಗೂ ಬಾಹ್ಯದಿಂದ ಹಲ್ಲೆಗಳಾಗುತ್ತಿದ್ದು ತನ್ನೊಂದಿಗೆ ಸಮಾಜವನ್ನು ಅಧ್ಯಾತ್ಮದ ಮೂಲಕ ಕ್ಷಾತ್ರತೇಜವನ್ನು ಜಾಗೃತಗೊಳಿಸಬೇಕಿದೆ. ಅದಕ್ಕಾಗಿ ಹಿಂದೂಗಳು ಸ್ವಕತೃತ್ವವನ್ನು ತ್ಯಾಗ ಮಾಡಿ ಅಧರ್ಮದ ವಿರುದ್ದ ಕಾರ್ಯವನ್ನು ಮಾಡಬೇಕಿದೆ. ನಾವು ಮಹಿಳೆಯರೆಲ್ಲರು ಸೇರಿ ದೋಷವನ್ನು ನಿವಾರಿಸುತ್ತ ಒಟ್ಟಾಗಿ ಮುಂದೆ ಸಾಗಬೇಕಿದೆ. ಈ ರೀತಿಯಲ್ಲಿ ನಾವು ನಮ್ಮಲ್ಲಿಯ ಅಗ್ನಿಯನ್ನು ಜಾಗೃತಗೊಳಿಸಿ ಮುಂದೆ ಸಾಗಿದರೆ ಅಂಧಕಾರ ನಾಶವಾಗುತ್ತದೆ. ಆದ್ದರಿಂದ ಹಿಂದೂಗಳು ಬ್ರಾಹ್ಮತೇಜದಿಂದ ಕ್ಷಾತ್ರತೇಜವನ್ನು ಜಾಗೃತಗೊಳಿಸಿದರೆ ಭಾರತ ಸಹಿತ ವಿಶ್ವದಲ್ಲಿ ಎಲ್ಲೆಡೆ ‘ಹಿಂದೂ ರಾಷ್ಟ್ರ’ದ ಸ್ಥಾಪನೆ ಆಗುವುದು, ಹೀಗೆ ಓಜಸ್ವೀ ವಾಣಿಯಿಂದ ಶ್ರೀ ಲಾಲೇಶ್ವರ ಮಹಾದೇವ ದೇವಸ್ಥಾನ, ಬಿಕಾನೇರ್ (ರಾಜಸ್ಥಾನ)ನಲ್ಲಿಯ ಮಹಂತ ಸ್ವಾಮಿ ಸಂವಿತ್ ಸೋಮಗಿರಿಜೀ ಮಹಾರಾಜ್ ಇವರು ಉಪಸ್ಥಿತರಿದ್ದ ಹಿಂದುತ್ವನಿಷ್ಠರಿಗೆ ಮಾರ್ಗದರ್ಶನ ಮಾಡಿದರು. ಅವರು ರಾಮನಾಥಿ, ಗೋವಾದಲ್ಲಿನ ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಉದ್ಘಾಟನೆಯ ಸಮಯದಲ್ಲಿ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕ್ಷಾತ್ರತೇಜದ ಉಪಾಸನೆಯ ಅವಶ್ಯಕತೆ’ ಇದರ ಬಗ್ಗೆ ಮಾತನಾಡುತ್ತಿದ್ದರು. ಅಧಿವೇಶನದ ಆರಂಭದಲ್ಲಿ ಮಹಂತ ಸ್ವಾಮಿ ಸಂವಿತ್ ಸೋಮಗಿರಿಜೀ ಮಹಾರಾಜ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಸನಾತನದ ಧರ್ಮಪ್ರಸಾರಕರಾದ ಸದ್ಗುರು (ಕು.) ಅನುರಾಧಾ ವಾಡೆಕರ ಹಾಗೂ ಸದ್ಗುರು ನಂದಕುಮಾರ್ ಜಾಧವ್ ಇವರ ಹಸ್ತದಿಂದ ದೀಪಪ್ರಜ್ವಲನೆಯನ್ನು ಮಾಡಲಾಯಿತು. ಈ ಸಮಯದಲ್ಲಿ ದೇಶ-ವಿದೇಶಗಳಿಂದ ಸುಮಾರು ೧೫೦ ಕ್ಕೂ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಯ ೨೫೦ ಕ್ಕೂ ಹೆಚ್ಚು ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಈ ಅಧಿವೇಶನದಲ್ಲಿ ಕಾಶ್ಮೀರದ ಸಮಸ್ಯೆ, ಕಲಂ ೩೭೦ ರದ್ದುಗೊಳಿಸುವುದು, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕದಲ್ಲಿಯ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯನ್ನು ಎತ್ತುವುದು, ರಾಷ್ಟ್ರ ಹಾಗೂ ಧರ್ಮದ ಮೇಲಾಗುತ್ತಿರುವ ಆಘಾತವನ್ನು ತಡೆಯಲು ಉಪಾಯ, ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಮುಂದಿನ ದಿಕ್ಕು ಹಿಗೆ ವಿವಿಧ ವಿಷಯದ ಬಗ್ಗೆ ಸವಿಸ್ತಾರ ಚರ್ಚೆಯನ್ನು ಮಾಡಲಾಗುವುದು.

ದೇಶದಲ್ಲಿಯ ಬಹುಸಂಖ್ಯಾತ ಹಿಂದೂಗಳಿಗೆ ಸಂವಿಧಾನಿಕವಾಗಿ ರಕ್ಷಣೆಯನ್ನು ಪಡೆದುಕೊಳ್ಳಲು ಹಿಂದೂ ಸಂಘಟನೆಗಳ ಅಧಿವೇಶನ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಭಾರತದಲ್ಲಿ ಬಹುಸಂಖ್ಯಾತ ಸಮುದಾಯದ ಹಿರಿಯ ನಾಯಕರನ್ನು ಒಟ್ಟಾಗಲು ಕಾನೂನು ಪ್ರಕಾರ ನಿರ್ಬಂಧವಿದೆಯೇ ? ಇದಕ್ಕೆ ಉತ್ತರ ‘ಇಲ್ಲ’ ಹೀಗಿರುವಾಗ ಈ ಪ್ರಶ್ನೆ ಏಕೆ ಉದ್ಭವಿಸುತ್ತದೆ ? ಇದಕ್ಕೆ ಒಂದೇ ಕಾರಣ ಅದುವೆ ಭಾರತದಲ್ಲಿಯ ಬಹುಸಂಖ್ಯಾತ ಸನಾತನ ಧರ್ಮಕ್ಕೆ ಸಂವಿಧಾನಕವಾಗಿ ರಕ್ಷಣೆ ಇಲ್ಲ ! ಆದ್ದರಿಂದ ಇಂದು ಯಾರೋ ಎದ್ದುನಿಲ್ಲುತ್ತಾರೆ ಹಾಗೂ ಹಿಂದೂಗಳಿಗೆ ಅಪರಾಧಿಗಳೆಂದು ಪರಿಗಳಿಸಲು ಪ್ರಯತ್ನಿಸುತ್ತಾರೆ. ಜಗತ್ತಿನ ಎಲ್ಲ ದೇಶದಲ್ಲಿ ಅವರ ಸಂವಿಧಾನಕವಾಗಿ ಅಲ್ಲಿಯ ಬಹುಸಂಖ್ಯಾತರ ಧರ್ಮ, ಭಾಷೆ ಹಾಗೂ ಹಿತವನ್ನು ಕಾಪಾಡಲು ರಕ್ಷಣೆಯನ್ನು ಕೊಡಲಾಗಿದೆ. ಆದರೆ ಭಾರತವು ಒಂದೇ ರಾಷ್ಟ್ರವಾಗಿದೆ ಇಲ್ಲಿ ಬಹುಸಂಖ್ಯಾತ ಇದ್ದರೂ ಹಿಂದೂಗಳಿಗೆ ಸಂವಿಧಾನಕವಾಗಿ ಯಾವುದೇ ರಕ್ಷಣೆ ಕೊಟ್ಟಿಲ್ಲ. ತದ್ವಿರುದ್ಧ ಭಾರತೀಯ ಸಂವಿಧಾನವು ಅಲ್ಪಸಂಖ್ಯಾತರ ಪಂಥ, ಸಂಸ್ಕೃತಿ, ಭಾಷೆ ಹಾಗೂ ಹಿತಕ್ಕಾಗಿ ಅವರಿಗೆ ರಕ್ಷಣೆಯನ್ನು ನೀಡಲಾಗಿದೆ. ಈ ಸಂವಿಧಾನದ ಸಮಾನತೆಯ ತತ್ತ್ವದ (ಅಂದರೆ ‘ಲಾ ಆಫ್ ಇಕ್ವಾಲಿಟಿ’ಯ) ವಿರುದ್ಧವಾಗಿದೆ. ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಧರ್ಮ, ಸಂಸ್ಕೃತಿ, ಭಾಷೆ ಹಾಗೂ ಅವರ ಹಿತಕ್ಕಾಗಿ ಅವರಿಗೆ ಸಂವಿಧನಾತ್ಮಕವಾಗಿ ರಕ್ಷಣೆಯು ಸಿಗಬೇಕು, ಅದಕ್ಕಾಗಿ ಹಿಂದೂ ಸಂಘಟನೆಗಳ ಈ ಅಧಿವೇಶನವು ಆಗಿದೆ, ಹೀಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಮಾರ್ಗದರ್ಶನ ಮಾಡಿದರು.

ಭವಿಷ್ಯದಲ್ಲಿ ಭಾರತ ಮತ್ತು ನೇಪಾಳ ಸಹಿತ ಇಡೀ ಪೃಥ್ವಿಯಲ್ಲಿ ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಲು ಅಧಿವೇಶನದ ಆಯೋಜನೆ ! – ನಾಗೇಶ ಗಾಡೆ

ಹಿಂದೂ ಜನಜಾಗೃತಿ ಸಮಿತಿಯ ಕೇಂದ್ರ ಸಮನ್ವಯಕರಾದ ಶ್ರೀ. ನಾಗೇಶ ಗಾಡೆಯವರು ಅಧಿವೇಶನದ ಉದ್ದೇಶವನ್ನು ಮನವರಿಕೆ ಮಾಡುತ್ತಾ, ಜಗತ್ತಿನಲ್ಲಿ ಕ್ರೈಸ್ತ ಸಮುದಾಯದ ೧೫೨, ಇಸ್ಲಾಮಿ ೫೭, ಬೌದ್ಧರ ೧೨ ರಾಷ್ಟ್ರಗಳು ಹಾಗೂ ಜ್ಯೂಗಳ ‘ಇಸ್ರೇಲ್’ ಹೆಸರಿನ ಒಂದು ರಾಷ್ಟ್ರವಿದೆ. ಹಿಂದೂಗಳಿಗೆ ಮಾತ್ರ ಈ ಪೃಥ್ವಿಯಲ್ಲಿ ಒಂದೂ ರಾಷ್ಟ್ರವಿಲ್ಲ. ವಿಶ್ವದ ವೇದಿಕೆಯಲ್ಲಿ ಮುಂಬರುವ ೫ ವರ್ಷಗಳಲ್ಲಿ ಭಾರತ ಮತ್ತು ನೇಪಾಳ ಈ ಎರಡು ಹಿಂದೂ ರಾಷ್ಟ್ರಗಳು ಪುನರ್‌ಸ್ಥಾಪಿತವಾಗಬೇಕು ಎಂಬ ಉದ್ದೇಶದಿಂದ ವಿಚಾರಮಂಥನವಾಗಬೇಕು ಮತ್ತು ಹಿಂದೂ ಸಂಘಟನೆಗಳು ಆಯೋಜನಾಬದ್ಧ ರೀತಿಯಲ್ಲಿ ಈ ದಿಕ್ಕಿನಲ್ಲಿ ಮಾರ್ಗಕ್ರಮಿಸಬೇಕು, ಎಂಬುದೇ ಈ ಅಧಿವೇಶನದ ಮುಖ್ಯ ಉದ್ದೇಶವಾಗಿದೆ. ಹಿಂದೂ ರಾಷ್ಟ್ರ ಸ್ಥಾಪನೆ ಕೇವಲ ಭಾರತಕ್ಕೆ ಸೀಮಿತವಾಗಿರದೇ ವೇದಮಂತ್ರದಲ್ಲಿ ಹೇಳಿದಂತೆ ‘ಇಡೀ ಪೃಥ್ವಿ ಒಂದು ರಾಷ್ಟ್ರವಾಗಿದೆ’, ಈ ಸಮುದ್ರವಲಯಾಂಕಿತ ಪೃಥ್ವಿಯ ಮೇಲೆ ಭವಿಷ್ಯದಲ್ಲಿ ಹಿಂದೂ ರಾಷ್ಟ್ರ ಸ್ಥಾಪಿಸಬೇಕಾಗಿದೆ ಎಂದು ಹೇಳಿದರು
ಅಧಿವೇಶನದ ಉದ್ಘಾಟನೆಯ ಸಮಯದಲ್ಲಿ ಆರಂಭದಲ್ಲಿ ಶಂಖನಾದ ಮಾಡಲಾಯಿತು. ದೀಪಪ್ರಜ್ವಲನೆಯ ನಂತರ ಸನಾತನ ಪುರೋಹಿತ ಪಾಠಶಾಲೆಯ ಪುರೋಹಿತರು ವೇದಮಂತ್ರದ ಪಠಣ ಮಾಡಿದರು. ಅನಂತರ ಉಪಸ್ಥಿತ ಸಂತರಿಂದ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿನ ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳ ಸಂಘಟನೆ ಮಾಡಿರಿ !’ ಎಂಬ ಗ್ರಂಥಗಳನ್ನು ಹಾಗೆಯೇ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿನ ಸನಾತನದ ‘ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಹಾಗೂ ಗುಣ-ಸಂವರ್ಧನ ಪ್ರಕ್ರಿಯೆ’ ಈ ಮರಾಠಿ ಮತ್ತು ಹಿಂದಿ ಭಾಷೆಯ ಗ್ರಂಥಗಳ ಪ್ರಕಾಶನ ಮಾಡಲಾಯಿತು. ಈ ಸಮಯದಲ್ಲಿ ಶ್ರೀ. ಪ್ರದೀಪ ಖೆಮಕಾ ಇವರು ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಅಧಿವೇಶನದ ನಿಮಿತ್ತ ನೀಡಿದ ಸಂದೇಶದ ವಾಚನ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಮಿತಿಯ ಶ್ರೀ. ಸುಮಿತ ಸಾಗವೇಕರ ಇವರು ಮಾಡಿದರು.

ಹಿಂದೂ ಜನಜಾಗೃತಿ ಸಮಿತಿಯ ಅಂತರ್ಗತ ‘ಉದ್ಯೋಗಪತಿ ಪರಿಷತ್ತು’ ಮತ್ತು ‘ಆರೋಗ್ಯ ಸಹಾಯತಾ ಸಮಿತಿ’ ಸ್ಥಾಪನೆ !

ಈ ಅಧಿವೇಶನದಲ್ಲಿ ಹಿಂದೂ ಜನಜಾಗೃತಿ ಸಮಿತಿ ಅಂತರ್ಗತ ‘ಉದ್ಯೋಗಪತಿ ಪರಿಷತ್ತು’ ಮತ್ತು ‘ಆರೋಗ್ಯ ಸಹಾಯತಾ ಸಮಿತಿ’ ಇವುಗಳನ್ನು ಸ್ಥಾಪನೆ ಮಾಡಲಾಯಿತು. ಮಹಂತ ಸ್ವಾಮಿ ಸಂವಿತ್ ಸೋಮಗಿರಿಜಿ ಮಹಾರಾಜರ ಮಂಗಲಹಸ್ತದಿಂದ ವೇದಮಂತ್ರಗಳ ಘೋಷದೊಂದಿಗೆ ಈ ಸಂಘಟನೆಗಳ ಬೋಧಚಿಹ್ನೆಗಳ ಅನಾವರಣ ಮಾಡಲಾಯಿತು. ಸಂಘಟನೆಯ ಉದ್ದೇಶದ ಮಾಹಿತಿಯನ್ನು ಸಮಿತಿಯ ಕೇಂದ್ರ ಸಮನ್ವಯಕ ಶ್ರೀ. ನಾಗೇಶ ಗಾಡೆಯವರು ಎಲ್ಲರಿಗೆ ಮನವರಿಕೆ ಮಾಡಿಕೊಟ್ಟರು. ಹಿಂದುತ್ವನಿಷ್ಠರಿಗೆ ಸಹಾಯ ಮಾಡಲು ‘ಉದ್ಯೋಗಪತಿ ಪರಿಷತ್ತು’ ಮತ್ತು ಆಪತ್ಕಾಲದಲ್ಲಿ ಸಮಾಜಕ್ಕೆ ಸಹಾಯ ಮಾಡುವುದು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪಿಡುಗುಗಳ ನಿರ್ಮೂಲನೆಗಾಗಿ ‘ಆರೋಗ್ಯ ಸಹಾಯತಾ ಸಮಿತಿ’ ಈ ಉದ್ದೇಶದಿಂದ ಈ ಎರಡೂ ಸಂಘಟನೆಗಳು ಕಾರ್ಯನಿರತವಾಗಿರಲಿದೆ.