Home Local ಶ್ರೀ ಶ್ರೀ ಶಂಕರಾನಂದ ಸ್ವಾಮೀಜಿಯವರಿಗೆ ಗೋಕರ್ಣ ಗೌರವ.

ಶ್ರೀ ಶ್ರೀ ಶಂಕರಾನಂದ ಸ್ವಾಮೀಜಿಯವರಿಗೆ ಗೋಕರ್ಣ ಗೌರವ.

SHARE

ಗೋಕರ್ಣ :ಪ ಪೂ ಶ್ರೀ ಶ್ರೀ ಶಂಕರಾನಂದ ಸ್ವಾಮೀಜಿ , ಶ್ರೀ ಮುಕ್ಕಣ್ಣೇಶ್ವರ ಮಠ, ಗದಗ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 514ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ಉಪಾಧಿವಂತ ಮಂಡಳದ ವೇ ರಾಮಚಂದ್ರ ಜಂಭೆ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .