Home Local ಯೋಗ ಮತ್ತು ಆಹಾರ ಪದ್ಧತಿ – ಹೆಗಡೆಯಲ್ಲಿ ಉಪನ್ಯಾಸ.

ಯೋಗ ಮತ್ತು ಆಹಾರ ಪದ್ಧತಿ – ಹೆಗಡೆಯಲ್ಲಿ ಉಪನ್ಯಾಸ.

SHARE

ಕುಮಟಾ: ಪತಂಜಲಿ ಯೋಗ ಪ್ರತಿಷ್ಠಾನ ಹರಿದ್ವಾರ ಇವರ ನಿರ್ದೇಶನದಲ್ಲಿ, ಪತಂಜಲಿ ಯೋಗ ಸಮಿತಿ ಕುಮಟಾದ ಸಹಯೋಗದೊಡನೆ ಹೆಗಡೆಯ ಕಾನಮ್ಮ ದೇವಾಲಯದಲ್ಲಿ ಉಪನ್ಯಾಸ ಕಾರ್ಯಾಗಾರ ನಡೆಯಿತು.

ಖ್ಯಾತ ಆಯುರ್ವೇದ ವೈದ್ಯರಾದ ಡಾ. ನಾಗರಾಜ ಭಟ್, ಶ್ರೀನಾಗ ಆಯೂರ್ಧಾಮ, ಹೊಲನಗದ್ದೆ ಇವರು ಯೋಗ ಮತ್ತು ಆಹಾರ  ಪದ್ಧತಿಯ ಮೇಲೆ ವಿಶೇಷ ಉಪನ್ಯಾಸ ನೀಡಿ ಪ್ರಸಕ್ತ ಸನ್ನಿವೇಶದಲ್ಲಿ ಯೋಗದ ಮಹತ್ವ, ಆಹಾರ ಕ್ರಮದಲ್ಲಿ ಬದಲಾವಣೆ, ನಿಷಿದ್ಧ ಆಹಾರ ವಸ್ತುಗಳ ದುಷ್ಪರಿಣಾಮ ಇನ್ನಿತರ ವಿಷಯದ ಮೇಲೆ ಸಲಹೆ ನೀಡಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು RSS ಸಂಚಾಲಕರಾದ ಶ್ರೀ ಮಹೇಶ ನಾಯ್ಕ ವಹಿಸಿದ್ದರು.


ಯೋಗ ಶಿಕ್ಷಕರಾದ ಕೆ.ಜಿ ಭಟ್ ಪ್ರಾಸ್ತಾವಿಕ ಮಾತನಾಡಿದರು. ಪತಂಜಲಿ ಶಾಖಾ ಪ್ರಮುಖರಾದ ಶ್ರೀ ವಿನಾಯಕ ಹೆಗಡೆ ಹಾಗೂ ಶ್ರೀ ನಾಗೇಂದ್ರ ಭಟ್  ಸಂಘಟಿಸಿದರು. ಡಾ.ವಿನಯಾ ಉಪಸ್ಥಿತರಿದ್ದರು. ಪ್ರತಿದಿನ ಬೆಳಿಗ್ಗೆ ೫.೩೦ ರಿಂದ ಕಾನಮ್ಮಾ ದೇವಾಲಯದ ಪರಿಸರದಲ್ಲಿ ಶ್ರೀ  ಕೆ.ಜಿ ಭಟ್ ರಿಂದ ಉಚಿತ ಯೋಗ ಶಿಕ್ಷಣ ನಡೆಯುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆಯಬಹುದು.