Home Important 2017ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ

2017ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ

SHARE

ಕುಂಬಳೆ—ಕೊಡಗಿನಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಿಳಾ ಮಂಡಲ ಸಹಯೋಗದಲ್ಲಿ ಅಖಿಲಭಾರತ ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ 2017ನೇ ಸಾಲಿನ (ಈ ವೇದಿಕೆಗೆ ಇದೀಗ ೨೨ನೇ ವರ್ಷ) ಕೊಡಗಿನಗೌರಮ್ಮ ಕಥಾಸ್ಪರ್ಧೆಯ ಫಲಿತಾಂಶ ಬಂದಿದ್ದು ; ಶ್ರೀಮತಿ ವಿಜಯಲಕ್ಷ್ಮಿ ಕಟ್ಟದಮೂಲೆಯವರ ’ದೇಶಭಕ್ತಿ’ ಕತೆಗೆ ದೊರಕಿದೆ. ಇವರಿಗೆ ಒಪ್ಪಣ್ಣನೆರೆಕರೆ ಪ್ರತಿಷ್ಠಾನ ನಡೆಸಿದ ಸ್ಪರ್ಧೆಗಳಲ್ಲೂ ಈ ಹಿಂದೆ ಪ್ರಬಂಧ ಹಾಗೂ ಕತೆಯಲ್ಲಿ ಬಹುಮಾನ ಬಂದಿರುತ್ತದೆ. ಕಥೆ, ಕವನ, ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತಿದ್ದು, ಕೆಲವು ಸಾಹಿತ್ಯ ಗೋಷ್ಟಿಗಳಲ್ಲೂ ಆಕಾಶವಾಣಿಯಲ್ಲೂ ಭಾಗವಹಿಸಿರುತ್ತಾರೆ.


ದ್ವಿತೀಯಃ- ಶ್ರೀಮತಿ ಶಾರದಾ ಕಾಡಮನೆಯವರ ’ಸೂರ್ಯಕಿರಣ’ ಕತೆ ಎರಡನೇ ಬಹುಮಾನ ಗೆದ್ದುಕೊಂಡಿದೆ. ಇದೇ ವೇದಿಕೆಯಲ್ಲಿ ಈ ಹಿಂದೆ ಕತೆಬರೆದು ಮೆಚ್ಚುಗೆ ಗಳಿಸಿರುವ ಶಾರದಾ ಎರಡು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಕವನವನ್ನು ಸುಶ್ರಾವ್ಯವಾಗಿ ಹಾಡುವ ಇವರು ಮಡಿಕೇರಿ, ಮಂಗಳೂರು ಆಕಾಶವಾಣಿಗಳಲ್ಲೂ,ಬದಿಯಡ್ಕದಲ್ಲಿ ನಡೆದ ವಿಶ್ವತುಳುವರೆ ಆಯನೊದಲ್ಲೂ ಹಾಡಿದ್ದಾರೆ. ಹಾಗೆಯೇ ಯೋಗ ತರಬೇತಿ ಶಿಬಿರವನ್ನೂ ನಡೆಸುತ್ತಿದ್ದಾರೆ.


ತೃತೀಯ ವಿಜೇತೆಃ- ಶ್ರೀಮತಿ ಅಂಜಲಿ ಹೆಗಡೆಯವರ ’ಕಥೆಯಾದವಳು’ ಕತೆಗೆ ಮೂರನೆ ಬಹುಮಾನ ಬಂದಿದೆ. ಮೂಲತಃ ಸಿದ್ದಾಪುರದ ಇವರು ಸಾಫ್ಟ್ ವೇರ್ ಇಂಜಿನಿಯರಾಗಿ ಬೆಂಗಳೂರಲ್ಲಿರುವ ಇವರು ಛಾಯಾಗ್ರಹಣ ಆಸಕ್ತಿ ಬೆಳೆಸಿಕೊಂಡಿದ್ದು. ಕಥೆ, ಕವನ, ಲಲಿತ ಪ್ರಬಂಧ ಬರೆಯುವುದಲ್ಲದೆ, ದಾರಾವಾಹಿಗಳ ಚಿತ್ರಕತೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ತೀರ್ಪುಗಾರರುಃ- ೧. ಪ್ರಾಧ್ಯಾಪಕ ಡಾ|ಮಹಾಲಿಂಗಭಟ್, M.A.PhD. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನ ನಿವೃತ್ತ ಸಂಸ್ಕೃತ ಹಾಗೂ ಕನ್ನಡ ಪ್ರೊಫೆಸರ್ ಅಲ್ಲದೆ PhD ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಆಗಿದ್ದವರು.
೨. ನಿವೃತ್ತ ಅಧ್ಯಾಪಕ, ಪ್ರಖ್ಯಾತ ಸಾಹಿತಿ , ಶಿಕ್ಷಣ ತಜ್ಞ ,ಶ್ರೀಯುತ ವಿ.ಬಿ.ಕುಳಮರ್ವ.
೩. ನಿವೃತ್ತ ಕನ್ನಡ ಪ್ರೊಫೆಸರ್, ಕಣ್ಣೂರು ವಿಶ್ವವಿದ್ಯಾನಿಲಯದ, ಭಾರತೀಯ ಭಾಷಾ ಅಧ್ಯಯನ ಕೇಂದ್ರದ ನಿರ್ದೇಶಕರೂ ಆದ ಡಾ| ಯು.ಮಹೇಶ್ವರಿ. ಇವರುಗಳು ತೀರ್ಪುಗಾರರಾಗಿ ಸಹಕರಿಸಿರುತ್ತಾರೆ.

ವರದಿ- ವಿಜಯಾಸುಬ್ರಹ್ಮಣ್ಯ, ಸಂಚಾಲಕಿ, ಕೊಡಗಿನಗೌರಮ್ಮ ಕಥಾಸ್ಪರ್ಧೆ.