Home Local ಚುನಾವನಾ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶ!

ಚುನಾವನಾ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶ!

SHARE

ಕಾರವಾರ: ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯಸಾರವನ್ನು ಕಾರವಾರ ತಾಲೂಕಿನ ಮಾಜಾಳಿ ಚೆಕ್‍ಪೋಸ್ಟ್ ಸಮೀಪದ ಅರಣ್ಯ ಪ್ರದೇಶದಲ್ಲಿ ನಾಶಪಡಿಸಲಾಯಿತು. ಈ ಮದ್ಯವನ್ನು ಕಳೆದ ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಲಾಗಿತ್ತು.

ಕಳೆದ ಜ.29 ರಂದು ಗೋವಾದಿಂದ ಕೇರಳದ ಕಡೆಗೆ ಹೋಗುತ್ತಿದ್ದ ಮೀನು ಲಾರಿಯನ್ನು ತಪಾಸಣೆ ನಡೆಸಿದ್ದ ಅಧಿಕಾರಿಗಳಿಗೆ ಮೀನಿನ ಟ್ರೇಗಳ ಮದ್ಯೆ 3,600 ಲೀ. ಸ್ಪಿರಿಟನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಬಳಿಕ ಅಧಿಕಾರಿಗಳು ಮದ್ಯವನ್ನು ವಶಪಡಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿದ್ದರು. ಅದರಂತೆ ಜಪ್ತು ಮಾಡಿಕೊಂಡ ಸ್ಪಿರಿಟ್ ಬಳಕೆಗೆ ಅವಕಾಶವಿಲ್ಲದ ಕಾರಣ ಬುಧವಾರ ಮಾಜಾಳಿ ಬಳಿ ಅರಣ್ಯ ಪ್ರದೇಶದಲ್ಲಿ ಗುಂಡಿ ತೋಡಿ ಅದರಲ್ಲಿ ಸ್ಪಿರಿಟ್‍ಗಳನ್ನು ಸುರಿದರು. ಈ ವೇಳೆ ಕೆಲ ಕಾಲ ಮಳೆ ಅಡ್ಡಿ ಮಾಡಿತಾದರು ಮಳೆ ನಿಂತ ಬಳಿಕ ಸುರಿದ ಸ್ಪಿರಿಟ್‍ಗೆ ಬೆಂಕಿ ಹಚ್ಚಿ ನಾಶ ಪಡಿಸಿದರು.