Home Local ಜಿ.ಐ ಹೆಗಡೆ ಕಡಬಾಳ ಅವರಿಗೆ ಆತ್ಮೀಯ ಬೀಳ್ಕೊಡುಗೆ: ವೃತ್ತಿ ಜೀವನ ನೆನೆದ ಶಿಕ್ಷಕ.

ಜಿ.ಐ ಹೆಗಡೆ ಕಡಬಾಳ ಅವರಿಗೆ ಆತ್ಮೀಯ ಬೀಳ್ಕೊಡುಗೆ: ವೃತ್ತಿ ಜೀವನ ನೆನೆದ ಶಿಕ್ಷಕ.

SHARE

ಶಿರಸಿ:ಸರ್ಕಾರಿ ನಿಯಮದಂತೆ ವೃತ್ತಯಿಂದ ನಿವೃತ್ತಿ ಹೊಂದಿದರೂ ನಾನೂ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿ ಇಲ್ಲಿಯೆ ಉದ್ಯೋಗ ನಿವೃತ್ತಿ ಹೊಂದಿದ ಸಂತೃಪ್ತಿಯ ಭಾವನೆ ಹೊಂದಿದ್ದೇನೆ. ಮುಂದೆಯೂ ಸಹ ಸಂಸ್ಥೆಯ ಎಲ್ಲ ಕಾರ್ಯಗಳಿಗೂ ಕೈ ಜೋಡಿಸುವೆ ಎಂದು ಜಿ.ಐ ಹೆಗಡೆ ಕಡಬಾಳ ಹೇಳಿದರು. ಅವರು ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಳೆದೊಂದು ವರ್ಷದಿಂದ ಮುಖ್ಯಾಧ್ಯಾಪಕರಾಗಿ ಹಾಗೂ ತಾಲೂಕಿನ ಶ್ರೀ ಲಕ್ಷ್ಮೀನರಸಿಂಹ ಪ್ರೌಢಶಾಲೆಯಲ್ಲಿ ಕಳೆದ 25ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜಿ.ಐ ಹೆಗಡೆ ಕಡಬಾಳ ಇವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

ತಾಲೂಕಿನಲ್ಲಿಯೇ ಉತ್ತಮ ಶೈಕ್ಷಣಿಕ ವಾತಾವರಣವನ್ನು ಹೊಂದಿದ ಪ್ರೌಢಶಾಲೆ ಇದಾಗಿದೆ. ಆಡಳಿತ ಮಂಡಳಿಯ ಸಹಕಾರದ ನಡುವೆ ವಿದ್ಯಾರ್ಥಿಗಳು ಶಾಲೆಯ ಗೌರವಕ್ಕೆ ಪಾಲಕರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಪಾಲಕರಿಗೆ ಹಾಗೂ ಸಮಾಜಕ್ಕೆ ಕೀತಿ ತರುವ ಕಾರ್ಯ ಮಾಡಬೇಕು. ಅಂತೆಯೇ ಪಾಲಕರುಗಳು ಶಾಲೆಯ ಏಳ್ಗೆಗೆ ಸಹಕಾರ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಪ್ರಮುಖರಾದ ನರಸಿಂಹ ಹೆಗಡೆ ನೈಗಾರ, ಸುದರ್ಶನ ಹೆಗಡೆ ಕಡಬಾಳ, ಎಸ್.ಕೆ ಹೆಗಡೆ ತೊಳಗಾರಗದ್ದೆ, ಗೌರವ ಕಾರ್ಯದರ್ಶಿ ರಾಘವೆಂದ್ರ ಹೆಗಡೆ ವಾರಣಾಸಿಮನೆ, ಎನ್.ಎಸ್ ಭಟ್ಟ ಮಣದೂರು, ಕೆ.ಎನ್ ಹೆಗಡೆ ಹೊಸ್ಮನೆ, ಡಿ.ಜಿ ಹೆಗಡೆ ಗಡಿಮನೆ ಇತರರು ಉಪಸ್ಥಿತರಿದದರು.

ಈ ಸಂದರ್ಭದಲ್ಲಿ ಲಕ್ಷ್ಮೀನೃಸಿಂಹ ಪ್ರೌಢಶಾಲೆಗೆ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98.24 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಪ್ರಣವ ಹೆಗಡೆ ಕಡಬಾಳ,
ವೆಂಕಟ್ರಮಣ ಪರಮೇಶ್ವರ ಹೆಗಡೆ ದ್ವಿತಿಯ, ತೃತಿಯ ಸ್ಥಾನ ಪಡೆದ ಸಿಂದೂರ ಭಟ್ಟ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.