Home Local ವಿದ್ಯುತ್ ಅವಗಡ: ಅಂಕೋಲಾದಲ್ಲಿ ಬಲಿಯಾಯ್ತು ಜಾನುವಾರು!

ವಿದ್ಯುತ್ ಅವಗಡ: ಅಂಕೋಲಾದಲ್ಲಿ ಬಲಿಯಾಯ್ತು ಜಾನುವಾರು!

SHARE

ಅಂಕೋಲಾ : ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್ ಅವಗಡಗಳು ಸಂಭವಿಸಲು ಪ್ರಾರಂಭವಾಗಿದೆ. ಇದಕ್ಕೆ ಸಾಕ್ಷಿಯಾಗಿ ಇಂದು ಅಂಕೋಲಾದಲ್ಲಿ‌ಸಂಭವಿಸಿದ ವಿದ್ಯುತ್ ತಂತಿಯ ಅವಘೆವೇ ಸಾಕ್ಷಿ.

ವಿದ್ಯುತ್ ತಂತಿ ತುಂಡಾಗಿ ಬಿದ್ದು ಮೂರು ಆಕಳು ಮ್ರತಪಟ್ಟ ಘಟನೆ ತಾಲೂಕಿನ ಅಲಗೇರಿ ಗ್ರಾಮದಲ್ಲಿ ನಡೆದಿದೆ.

ಶನಿವಾರ ಬೆಳಿಗ್ಗೆ ಏಕಾಏಕಿ ರಸ್ತೆ ದೀಪದ ಕಂಬದಿಂದ ವಿದ್ಯುತ್ ಲೈನ್ ತುಂಡಾಗಿ ಆಕಳುಗಳ ಮೇಲೆ ಬಿದ್ದ ಪರಿಣಾಮವಾಗಿ ಆಕಳು ವಿದ್ಯುತ್ ಸ್ಪರ್ಷದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಈ ಬಾಗದಲ್ಲಿ ಬೆಳಗಿನ ಜಾವ ಶಾಲಾ ಮಕ್ಕಳು ಜನರು ಒಡಾಡುತ್ತಾರೆ. ಈ ಅವಗಡ ಸಂಭವಿಸಿದ ಸಂದರ್ಭದಲ್ಲಿ ಯಾರು ಒಡಾಡದ ಹಿನ್ನಲೆಯಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ.

ಹೆಸ್ಕಾಂ ಇಲಾಖೆಯ ತೀವ್ರ ನಿರ್ಲಕ್ಷತನವೆ ಈ ಘಟನೆಗೆ ಕಾರಣ. ಇಲಾಖೆ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿ, ಕಂದಾಯ ಅಧಿಕಾರಿ, ಹೆಸ್ಕಾಂ ಅಧಿಕಾರಿ, ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.