Home Local ಕೆನರಾ ಎಜ್ಯುಕೇಶನ್ ಸೊಸೈಟಿಯ ಗಿಬ್ ಇಂಗ್ಲೀಷ್ ಮೀಡಿಯಮ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ನೂತನ ಕಟ್ಟಡದ...

ಕೆನರಾ ಎಜ್ಯುಕೇಶನ್ ಸೊಸೈಟಿಯ ಗಿಬ್ ಇಂಗ್ಲೀಷ್ ಮೀಡಿಯಮ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ.

SHARE

ಕುಮಟಾ: ಇಲ್ಲಿಯ ಪ್ರತಿಷ್ಠಿತ ಕೆನರಾ ಎಜ್ಯುಕೇಶನ್ ಸೊಸೈಟಿಯ ಗಿಬ್ ಇಂಗ್ಲೀಷ್ ಮೀಡಿಯಮ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಹಾಗೂ ಅವರ ಪಟ್ಟದ ಶಿಷ್ಯ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳು ವಿದ್ಯುಕ್ತವಾಗಿ ನೆರವೇರಿಸಿದರು. ಆ ಮೂಲಕ‌ ಗಿಬ್ ಆಂಗ್ಲ ಮಾಧ್ಯಮ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ನೂತನ ಕಟ್ಟಡ ತರಗತಿಯ ಕಲಿಕೆಗೆ ಅನುವು ಮಾಡಿಕೊಡಲಾಯಿತು.

ಕಾರ್ಯಾಧ್ಯಕ್ಷರಾದ ಶ್ರೀ ವಸುದೇವ ಯಶ್ವಂತ ಪ್ರಭು ಸ್ವಾಗತಿಸಿದರು. ಉಪಾಧ್ಯಕ್ಷ ಶಿರೀಷ ಪಿ.ನಾಯಕ ಕಾರ್ಯದರ್ಶಿ ಎಸ್.ಎನ್. ಪ್ರಭು ಉಪಸ್ಥಿತರಿದ್ದರು.‌

ಅತಿಥಿಗಳಾಗಿ ಆಗಮಿಸಿದ ಶಾಸಕ ದಿನಕರ ಶೆಟ್ಟಿಯವರು ಕುಮಟಾದ ಅಭಿವೃದ್ಧಿಯ ಕನಸನ್ನು ಬಿಚ್ಚಿಟ್ಟರು. ಅದನ್ನು ನೆರವೇರಿಸಲು ಎಲ್ಲರ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ವಿಶೇಷ ದಾನಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಶೋಭಾ ಮುಜುಂದಾರ ವರದಿ ವಾಚಿಸಿದರು. ಶಿಕ್ಷಕರಾದ ಕಿರಣ ಪ್ರಭು, ಉಮೇಶ ಭಟ್ ನಿರೂಪಿಸಿದರು. ಶಿಕ್ಷಕ ವಿಷ್ಣು ಭಟ್ ವಂದಿಸಿದರು.‌