Home Article ಐತಿಹಾಸಿಕ ಯಾತ್ರೆ

ಐತಿಹಾಸಿಕ ಯಾತ್ರೆ

SHARE

ಭಾರತದ ಒಬ್ಬ ಮನುಷ್ಯನೂ ಒಂದು ವೇಳೆ ಇಷ್ಟೊಂದು ದೀರ್ಘಕಾಲದ ಯಾತ್ರೆ ಕೈಗೊಂಡಿರಲು ಸಾಧ್ಯವಿಲ್ಲ.
ಬಹುಶಃ ಇದೊಂದು ವಿಶ್ವದಾಖಲೆಯೇ ಆಗಿರಬಹುದು.
ಆದರೆ ಯಾತ್ರೆ ಕೈಗೊಂಡ ವ್ಯಕ್ತಿಗೆ ಇದರ ಪರಿವೆಯೇ ಇಲ್ಲ.

ಜನರನ್ನು ಹತ್ತಿರದಿಂದ ಕಂಡು, ಅವರೊಂದಿಗೆ ಸಂವಾದ ಮಾಡಿ, ಅವರೊಂದಿಗೆ ಒಬ್ಬರಾಗಿ, ಆ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಉಪಹಾರ ಸೇವಿಸಿ, ಅಲ್ಲಿ ಒಂದು ಗಿಡವನ್ನು ನೆಟ್ಟು, ಗೋಪೂಜೆ ನಡೆಸಿ, ಕೃಷಿ ವಿಷಯಗಳನ್ನು ಚರ್ಚಿಸಿ, ಗ್ರಾಮೀಣತೆಯನ್ನು ಅನುಭವಿಸಿ, ಅಲ್ಲಿನ ಸಂಸ್ಕಾರವನ್ನು ಅರಿಯುತ್ತಾ.. ಈ ವ್ಯಕ್ತಿ ನಡೆದದ್ದು ಬರೋಬ್ಬರಿ 23000 ಕಿಲೋಮೀಟರ್!!!

ಐದು ವರುಷಗಳ ದೀರ್ಘ ತಪಸ್ಸು.. ಮಾ‌ಧ್ಯಮ ಪ್ರಚಾರದ ಅಬ್ಬರವಿಲ್ಲದೆ, ಸದ್ದಿಲ್ಲದೆ 23 ರಾಜ್ಯಗಳ 2200 ಗ್ರಾಮಗಳನ್ನು ಸಂದರ್ಶಿಸಿದ್ದಾರೆ ಈ ಕಠಿಣ ವೃತಧಾರಿ…

ಇದು “ಭಾರತ ಪರಿಕ್ರಮ ಯಾತ್ರೆ” … 2012 ಆಗಸ್ಟ್‌ 09 ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆ.. ಭಾರತವನ್ನು ಕಾಣಲು, ಭಾರತದ ವೈವಿಧ್ಯ ಸಂಸ್ಕೃತಿಯ ಅನುಭವಿಸಲು ಯಾತ್ರೆಯ ಮೂಲಕ ಹೊರಟ ಆ ವ್ಯಕ್ತಿಯೇ 50 ವರುಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರೂ, ಅಖಿಲ ಭಾರತೀಯ ಸೇವಾಪ್ರಮುಖರೂ ಆಗಿದ್ದ ಕರ್ನಾಟಕದ ಪುತ್ತೂರಿನ *ಶ್ರೀ ಸೀತಾರಾಂ ಕೆದಿಲಾಯ*

“ಭಾರತ ಪರಿಕ್ರಮ ಯಾತ್ರೆ” ಯಲ್ಲಿ ಅವರು ಸುಮಾರು 23000 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಗ್ರಾಮ ಸಂದರ್ಶನ ನಡೆಸಿ ಆಗಿದೆ…
ಭಾರತವನ್ನ ಸಂಪೂರ್ಣವಾಗಿ ಸಂಚರಿಸಿದ ಈ ಅಪೂರ್ವ ಯಾತ್ರೆಯು 2017 ಜುಲೈ 9ರಂದು ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಳ್ಳಲಿದೆ.. ಒಂದು ಇತಿಹಾಸದಲ್ಲಿ ಸ್ಥಾನ ಪಡೆಯುವ ಈ ಯಾತ್ರೆಗೆ ಸಾಕ್ಷಿಯಾಗಲು ಕನ್ಯಾಕುಮಾರಿ ಸಂಭ್ರಮದಿಂದ ಅಣಿಯಾಗುತ್ತಿದೆ..