Home Local ಶ್ರೀ ಗುರು ಸುಧೀಂದ್ರ ಬಿ.ಕಾಂ ಕಾಲೇಜು ವಿದ್ಯಾರ್ಥಿಗಳ 99.35 ಫಲಿತಾಂಶ.

ಶ್ರೀ ಗುರು ಸುಧೀಂದ್ರ ಬಿ.ಕಾಂ ಕಾಲೇಜು ವಿದ್ಯಾರ್ಥಿಗಳ 99.35 ಫಲಿತಾಂಶ.

SHARE

ಎಪ್ರಿಲ್ 2018 ರಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಕಾಂ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಬಿ.ಕಾಂ ಕಾಲೇಜು ವಿದ್ಯಾರ್ಥಿಗಳು ಶೇ. 99.35% ಫಲಿತಾಂಶಪಡೆದು ಸಾಧನೆಗೈದಿದ್ದಾರೆ.

ವಿನುತಾ ನಾಯ್ಕ ಶೇ.97.7, ವಿಶಾಲಾಕ್ಷಿ ನಾಯ್ಕ ಶೇ.96, ಮೇಘಾ ನಾಯಕ ಶೇ.95 ಪಡೆದು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ. 32 ವಿದ್ಯಾರ್ಥಿಗಳು ಕೊಸ್ಟ ಅಕೌಂಟಿಂಗ್, ಇನ್‍ಕಂ ಟ್ಯಾಕ್ಸ, ಬ್ಯುಸಿನೆಸ್ ಲಾ ವಿಷಯಗಳಲ್ಲಿ 100 ಅಂಕಗಳನ್ನು ಪಡೆದಿರುತ್ತಾರೆ.

ಇವರ ಸಾಧನೆಯನ್ನು ಆಡಳಿತಮಂಡಳಿಯವರು, ಪ್ರಾಚಾರ್ಯರು, ಅಧ್ಯಾಪಕರು ಅಭಿನಂದಿಸಿದ್ದಾರೆ.