Home Local ಮಳೆಯ ಅವಾಂತರ: ಸಿದ್ಧಾಪುರದಲ್ಲಿ ಗುಡ್ಡ ಕುಸಿತ, ಧರೆಗುರುಳಿದವು ಮರಗಳು

ಮಳೆಯ ಅವಾಂತರ: ಸಿದ್ಧಾಪುರದಲ್ಲಿ ಗುಡ್ಡ ಕುಸಿತ, ಧರೆಗುರುಳಿದವು ಮರಗಳು

SHARE

ಸಿದ್ದಾಪುರ:ಕೆಲ‌ ದಿನಗಳಿಂದ‌ ಸುರಿದಿರುವ ಮಳೆಗೆ ಹಲವೆಡೆ ಅವಾಂತರದ ವರದಿಗಳು ಬರುತ್ತಿದೆ.

ಜಿಲ್ಲಾಯಾದ್ಯಂತ ಸುರಿದ ಭಾರೀ ಮಳೆಗೆ ಸಿದ್ದಾಪುರ ತಾಲೂಕಿನ ಜೋಗಿನ್ಮಠದ ಬಳಿಯ ಗುಡ್ಡ ಕುಸಿದಿದೆ.

ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುಡ್ಡ ಕುಸಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿದೆ ಎಂಬ ಬಗ್ಗೆ ವರದಿಯಾಗಿದೆ.

ಅಬ್ಭರದ ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ 9 ಮರ ಬಿದ್ದಿವೆ. ರಸ್ತೆಯಲ್ಲಿ ಬಿದ್ದ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 100 ಮೀಟರ್​ ಅಂತರದಲ್ಲಿ ಅಪಾಯದ ವಾತಾವರಣ ನಿರ್ಮಾಣಗೊಂಡಿದೆ. ಇನ್ನೂ ಕೂಡ ಗುಡ್ಡ ಕುಸಿಯುತ್ತಿದೆ. ತಹಶೀಲ್ದಾರ್​ ಪಟ್ಟರಾಜ ಗೌಡ ಸೇರಿದಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು ಜನತೆ ಭಯದಲ್ಲಿ ಬದುಕುವಂತಾಗಿದೆ.