Home Important ಪೂರ್ಣ ಬಜೆಟ್ ಮಂಡನೆಗೆ ತಗಾದೆ ತೆಗೆದಿರುವ ಸಿದ್ದರಾಮಯ್ಯ.!

ಪೂರ್ಣ ಬಜೆಟ್ ಮಂಡನೆಗೆ ತಗಾದೆ ತೆಗೆದಿರುವ ಸಿದ್ದರಾಮಯ್ಯ.!

SHARE

ಬೆಂಗಳೂರು-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಬದಲು ಲೇಖಾನುದಾನ ಮಾತ್ರ ಮಂಡಿಸಲಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜುಲೈ ತಿಂಗಳ ಮೊದಲ ವಾರದಲ್ಲಿ ಕುಮಾರಸ್ವಾಮಿ ಅವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಈಗಾಗಲೇ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸುತ್ತಿದ್ದರೆ.

ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪೂರ್ಣ ಬಜೆಟ್ ಮಂಡನೆಗೆ ತಗಾದೆ ತೆಗೆದಿರುವುದು ದೋಸ್ತಿ ಪಕ್ಷದಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬ ಅನುಮಾನವನ್ನು ಹುಟ್ಟು ಹಾಕಿದೆ. ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯನವರು, ನಾನು ಬಜೆಟ್ ಮಂಡಿಸಿ ಇನ್ನು ಕೆಲವು ತಿಂಗಳ ಕಳೆದಿಲ್ಲ. ಅದರಲ್ಲೇ ಸಾಕಷ್ಟು ಜನಪರವಾದ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೆ.