Home Local ಹಿಂದುಗಳ ಸಹನೆ ದೌರ್ಬಲ್ಯವಲ್ಲ ಅದು ಶಕ್ತಿ : ಶ್ರೀಕಲಾ‌ ಶಾಸ್ತ್ರಿ

ಹಿಂದುಗಳ ಸಹನೆ ದೌರ್ಬಲ್ಯವಲ್ಲ ಅದು ಶಕ್ತಿ : ಶ್ರೀಕಲಾ‌ ಶಾಸ್ತ್ರಿ

SHARE

ಹೊನ್ನಾವರ : ಹಿಂದುಗಳ ಸಹನೆ ಅದು ದೌರ್ಬಲ್ಯವಲ್ಲ ಅವರದ್ದು ಸಹನೆ ಶಕ್ತಿಯಾಗಿದೆ. ಹಿಂದುಗಳು ಒಗ್ಗಟ್ಟಾಗಿ ಹೋರಾಡುವ ಅನಿವಾರ್ಯತೆ ಇದೆ. ಹಿಂದೂ ಸಂಘಟನೆಗಳನ್ನು ಕಂಡರೆ ಇತರರು ಆಕ್ರಮಣಕ್ಕೆ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗ ಬೇಕು ಎಂದು ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಹೇಳಿದರು. ಅವರು ಶ್ರೀ ದುರ್ಗಾದೇವಿ ಸಭಾಭವನ ತಲಗೇರಿಯಲ್ಲಿ ನಡೆದ ನೂತನ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದ ಅತ್ಯುನ್ನತ ಪ್ರಧಾನಿ ಮೋದಿಯವರ ಆಡಳಿತ ಮುನ್ನಡೆಯಲು ನಾವು ಪ್ರಯತ್ನಿಸಬೇಕು ಎಂದರು.

ಈ ಸಂದರ್ಭದಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಸಾಧಿಸಿ ಶಾಸಕರಾದ ದಿನಕರ ಶೆಟ್ಟಿ ಯವರನ್ನು ಶ್ರೀ ದುರ್ಗಾದೇವಿ ಸಭಾಭವನ ತಲಗೇರಿಯಲ್ಲಿ ಪರವಾಗಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಬ್ರಹದ್ ಗಾತ್ರದ ಹಾರ ಹಾಕಿ ಅಭಿನಂದಿಸಿದ್ದು ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಸುಬ್ರಹ್ಮಣ್ಯ ಶಾಸ್ತ್ರಿ 20 ವರ್ಷಗಳ ನಂತರ ನಾವು ಶಾಸಕರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಎಲ್ಲ ಕಾರ್ಯಕರ್ತರ ಶ್ರಮದ ಫಲ ಇದು. ಮೋದಿಯವರ ಮೇಲೆ ದಿನಕರ ಶೆಟ್ಟಿಯವರ ಮೇಲೆ ನಂಬಿಕೆ ಇಟ್ಟು ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಇದು ಹೀಗೆ ನಿರಂತರವಾಗಿರಲಿ, ಬಹಳ ಒಳ್ಳೆಯ ವ್ಯಕ್ತಿಯನ್ನು ಇಂದು ಚುನಾಯಿಸಿದ್ದೀರಿ. 58 ಸಾವಿರ ಅದ್ಭುತ ಮತ ನೀಡಿ ಬಿಜೆಪಿ ಗೆ 20 ವರ್ಷಗಳಿಂದ ಇದ್ದ ನೋವನ್ನು ದೂರ ಮಾಡಿದ್ದೀರಿ ಇದಕ್ಕೆ ಕ್ಷೇತ್ರದ ಜನರನ್ನು ಅಭಿನಂದಿಸುತ್ತೇನೆ. ಲಕ್ಷಾಂತರ ಕಾರ್ಯಕರ್ತರ ಶ್ರಮದ ಫಲ ಇಂದು ಪ್ರಧಾನಿ ಆಗಿ ನರೇಂದ್ರ ಮೋದಿ ಯವರು ವೇಗದಲ್ಲಿ ದೇಶವನ್ನು ಮುನ್ನೆಡೆಸುತ್ತಿದ್ದಾರೆ. ದಿನಕರ ಶೆಟ್ಟಿ ಯವರು ಕೂಡ ತುಂಬಾ ಒಳ್ಳೆಯ ಗುಣಗಳನ್ನು ಹೊಂದಿದ್ದಾರೆ. ಯಾರೇ ಮನೆಗೆ ಬಂದರೂ ಕೂಡ ಪ್ರೀತಿಯಿಂದ ಅವರ ಸಮಸ್ಯೆ ಏನು ಅಂತ ಆಲಿಸಿ ಕೆಲಸ ಮಾಡಿ ಕಳುಹಿಸುವ ಉತ್ತಮ ವ್ಯಕ್ತಿ. ಶಾಸಕರ ಮನೆಗೆ ಒಮ್ಮೆ ಹೋದೆ ನಾಲ್ಕು ಬಾರಿ ಹೋದೆ ಎಂದು ಬೇಸರಿಸದೇ ಅವರ ಜತೆ ಮಾತನಾಡಿ ಕೆಲಸ ಮಾಡಿಸಿಕೊಳ್ಳಿ ಎಂದರು.

.

ಶಾಸಕರು ಮಾತನಾಡಿ ಮೊದಲನೇದಾಗಿ ನಾನು ಸನ್ಮಾನ ಬೇಡ ಅಂದರೂ ಪ್ರೀತಿಯಿಂದ ಕರೆದು ಗೌರವಿಸಿದ್ದೀರಿ ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ ನಿಮಗೆಲ್ಲ ನಾನು ಚಿರರುಣಿ ಹಾಗೂ ನಾನೂ ಕೂಡ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಈ ಭಾಗದಲ್ಲಿ ಅತಿ ಹೆಚ್ಚಿನ ಮತ ನೀಡಿದ್ದೀರಿ ನಿಮ್ಮ ಜೊತೆ ಯಾವತ್ತೂ ನಾನಿದ್ದೇನೆ ಹಾಗೂ ಕ್ಷೇತ್ರದ ಕೆಲಸ ಮಾಡಲು ಬಹಳ ಉತ್ಸಾಹ ಹೊಂದಿದ್ದೇನೆ ಎಂದು ಜನತೆಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಹೇಮಂತ ಗಾಂವ್ಕರ್,ಗುರು ಗೌಡ, ಚಂದಾವರ ಪಂಚಾಯತಿ ಅಧ್ಯಕ್ಷ ಚಂದ್ರು ನಾಯ್ಕ, ಪ್ರಶಾಂತ್ ನಾಯ್ಕ ಹಾಗೂ ಇನ್ನಿತರರು ಹಾಜರಿದ್ದರು.