Home Local ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಭಟ್ಕಳದಲ್ಲಿ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ

ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಭಟ್ಕಳದಲ್ಲಿ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ

SHARE

ಭಟ್ಕಳ: ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಭಟ್ಕಳದಲ್ಲಿ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ವೇದಮೂರ್ತಿ ಪ್ರಮೋದ್ ಭಟ್ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಭಟ್ಕಳ್ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುರೇಶ್ ನಾಯ್ಕರವರು, ಟ್ರಸ್ಟಿಯಾದ ರಾಜೇಶ್ ನಾಯ್ಕರವರು, ಭಟ್ಕಳದ ಮಾಜಿ ಶಾಸಕರಾದ ಜೆ.ಡಿ.ನಾಯ್ಕರವರು, ಪ್ರಾಂಶುಪಾಲರಾದ ಜ್ಯೋತಿಷ್ ರವರು ಉಪಸ್ಥಿತರಿದ್ದರು.

ವೇದಮೂರ್ತಿ ಲಕ್ಷ್ಮೀಕಾತ್ ಭಟ್ ರವರು ಅಕ್ಷರಾಭ್ಯಾಸದ ಆಚರಣೆಯ ವಿಧಾನ, ಇತಿಹಾಸ ಮತ್ತು ಅದರ ಮಹತ್ವವನ್ನು ವಿವರಿಸಿದರು.

ಈ ಆಚರಣೆಯು ಧರ್ಮದ ಹಾಗೂ ಸಂಸ್ಕೃತಿಯ ಪ್ರತೀಕವೆಂದು ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಪೋಷಕರಿಗೆ ಮನದಟ್ಟು ಮಾಡಿದರು. ಈ ಆಚರಣೆಯನ್ನು ಮಾಡಿದ ವಿದ್ಯಾಂಜಲಿ ಶಾಲೆಗೆ ಪೋಷಕರು ವಂದಿಸಿದರು.