Home Local ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಪತ್ರಕರ್ತ ಶೇಷಕೃಷ್ಣ ಆಯ್ಕೆ: ಜುಲೈ ೧ರಂದು...

ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಪತ್ರಕರ್ತ ಶೇಷಕೃಷ್ಣ ಆಯ್ಕೆ: ಜುಲೈ ೧ರಂದು ಪ್ರಶಸ್ತಿ ಪ್ರಧಾನ

SHARE

ಕಾರವಾರ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರ ಕನ್ನಡ ಜಿಲ್ಲಾ ಘಟಕವು ನೀಡುತ್ತಿರುವ ರಾಜ್ಯಮಟ್ಟದ ಹರ್ಮನ್ ಮೊಗ್ಲಿಂಗ್ prashasti -2018 ಪ್ರಶಸ್ತಿಗೆ ಬಿ ಟಿವಿ ಸುದ್ದಿ ವಾಹಿನಿಯ ಕಾರ್ಯಕ್ರಮ ನಿರೂಪಕ ಹಾಗೂ ಪತ್ರಕರ್ತ ಶೇಷಕೃಷ್ಣ ಅವರು ಆಯ್ಕೆ ಆಗಿದ್ದಾರೆ ಎಂದು ಯೂನಿಯನ್ ಜಿಲ್ಲಾಧ್ಯಕ್ಷ ಕಡತೋಕ ಮಂಜು ತಿಳಿಸಿದ್ದಾರೆ.

ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂಬ ಗೌರವಕ್ಕೆ ಪಾತ್ರರಾದ ಹತ್ತೊಂಭತ್ತನೇ ಶತಮಾನದ ಹರ್ಮನ್ ಮೊಗ್ಲಿಂಗ್ ಅವರ ಹೆಸರಿನಲ್ಲಿ ಯೂನಿಯನ್ ನ ಜಿಲ್ಲಾ ಘಟಕವು ರಾಜ್ಯದಲ್ಲಿಯೇ ಮೊಟ್ಟ ಮೊದಲು ಕಳೆದ ಮೂರು ವರ್ಷದಿಂದ ಪ್ರಶಸ್ತಿ ನೀಡುತ್ತಿದೆ.

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ, ವಿಜಯ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ವರದಿಗಾರ ಗುರುದತ್ ಭಟ್, ಗೃಹ ರಕ್ಷಕ ದಳದ ಕಮಾಂಡೆಂಟ್ ದೀಪಕ್ ಗೋಕರ್ಣ ನೇತೃತ್ವದ ಆಯ್ಕೆ ಸಮಿತಿ ಪತ್ರಕರ್ತ ಶೇಷಕೃಷ್ಣ ಆವರ ಹೆಸರನ್ನು ಸೂಚಿಸಿದೆ.

ಜುಲೈ 1 ರಂದು ಕಾರವಾರದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಡತೋಕ ಮಂಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.