Home Local ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶಾನಭಾಗ ದತ್ತಿನಿಧಿ ಸ್ಥಾಪನೆ.

ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶಾನಭಾಗ ದತ್ತಿನಿಧಿ ಸ್ಥಾಪನೆ.

SHARE

ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 2004-05 ನೇ ಸಾಲಿನ ರ್ಯಾಂಕ್ ವಿದ್ಯಾರ್ಥಿನಿ ಜ್ಯೋತಿ ರಾಮಚಂದ್ರ ಶಾನಭಾಗ ಇವರು ತಮ್ಮ ತಾಯಿ ಸೀತಾಬಾಯಿ ಮತ್ತು ತಂದೆ ರಾಮಚಂದ್ರ ಮಂಗೇಶ ಶಾನಭಾಗ, ಚಿತ್ರಿಗಿ ಅವರ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪ್ರತಿವರ್ಷ ವಿಜ್ಞಾನದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ಬಹುಮಾನ ವಿತರಿಸಲು ಅನುಕೂಲವಾಗುವಂತೆ ಹತ್ತು ಸಾವಿರ ರೂ. ದತ್ತಿನಿಧಿ ಸ್ಥಾಪಿಸಿದ್ದಾರೆ.

ಈ ಪ್ರಯುಕ್ತ ಮುಖ್ಯಾಧ್ಯಾಪಕ ಎನ್.ಆರ್.ಗಜು ಅವರಿಗೆ ರಾಮಚಂದ್ರ ಶಾನಭಾಗ ಅವರು 10,000/- ರೂ.ಗಳ ದತ್ತಿನಿಧಿ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ವಿ.ಎನ್.ಭಟ್ಟ, ಎಸ್.ಪಿ.ಪೈ, ಕಿರಣ ಪ್ರಭು ಉಪಸ್ಥಿತರಿದ್ದರು.