Home Important ವಿಶ್ವದಲ್ಲೇ ಭಾರತಕ್ಕೆ ಗೌರವ ದೊರೆಯುವಂತೆ ಮಾಡಿರುವುದು ನರೇಂದ್ರ ಮೋದಿ ಸರ್ಕಾರದ ಸಾಧನೆ : ನಳಿನ್ ಕುಮಾರ್...

ವಿಶ್ವದಲ್ಲೇ ಭಾರತಕ್ಕೆ ಗೌರವ ದೊರೆಯುವಂತೆ ಮಾಡಿರುವುದು ನರೇಂದ್ರ ಮೋದಿ ಸರ್ಕಾರದ ಸಾಧನೆ : ನಳಿನ್ ಕುಮಾರ್ ಕಟೀಲು

SHARE

ಸುಳ್ಯ: ಭಷ್ಟಾಚಾರ ರಹಿತ, ಜನಪರ ಯೋಜನೆ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದು, ವಿಶ್ವದಲ್ಲೇ ಭಾರತಕ್ಕೆ ಗೌರವ ದೊರೆಯುವಂತೆ ಮಾಡಿರುವುದು ನರೇಂದ್ರ ಮೋದಿ ಸರ್ಕಾರದ ಸಾಧನೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಸುಳ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 18 ಸಾವಿರ ಗ್ರಾಮಗಳನ್ನು ಕತ್ತಲು ಮುಕ್ತವಾಗಿಸುವ ಪಣ ತೊಟ್ಟು, ಅವಧಿಗೆ ಮುಂಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಕೀರ್ತಿ ಕೇಂದ್ರ ಸರಕಾರದ್ದು. ಭಯೋತ್ಪಾದನೆ ನಿಗ್ರಹ, ಸ್ವಚ್ಛ ಗ್ರಾಮ ನಿರ್ಮಾಣ, ಮುದ್ರಾ ಯೋಜನೆಯಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶ, ಜನರಿಕ್ ಕೇಂದ್ರದ ಮೂಲಕ ಕಡಿಮೆ ಬೆಲೆಯಲ್ಲಿ ಔಷಧ, ಬಡವರಿಗೆ ಅಡುಗೆ ಅನಿಲ, ಗ್ರಾ.ಪಂ.ಗಳಿಗೆ ಡಿಜಿಟಲ್ ಸೌಲಭ್ಯ ಹೀಗೆ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ದೇಶದ ಅಮೂಲಾಗ್ರ ಬದಲಾವಣೆಗೆ ಕೊಡುಗೆ ನೀಡಿದೆ ಎಂದರು.

ಅಜ್ಜಾವರ-ಮಂಡೆಕೋಲು ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಿಆರ್‍ಎಫ್ ನಿಧಿಯಿಂದ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರಕಾರ ಟೆಂಡರ್ ತೆರೆಯದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ. ಈ ಬಗ್ಗೆ ಒತ್ತಡ ಹೇರಲಾಗುವುದು ಎಂದು ಸಂಸದರು ನುಡಿದರು.