Home Local ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಜಾಗತಿಕ ಯೋಗ ದಿನಾಚರಣೆ.

ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಜಾಗತಿಕ ಯೋಗ ದಿನಾಚರಣೆ.

SHARE

ಕುಮಟಾ: ಜಾಗತಿಕ ಯೋಗ ದಿನಾಚರಣೆ ನಿಮಿತ್ತ ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕ ಯೋಗಗುರು ಎಲ್.ಎನ್.ಅಂಬಿಗ ನೇತೃತ್ವದಲ್ಲಿ ಯೋಗ ತರಬೇತಿಗೆ ಚಾಲನೆ ನೀಡಲಾಯಿತು.

ಸೂರ್ಯನಮಸ್ಕಾರ ವಿಧಾನವನ್ನು ಮೊದಲ ದಿನ ರೂಢಿಸಿಕೊಡಲಾಯಿತು. ಯೋಗ ಪ್ರತಿಭೆಗಳಾದ ರಕ್ಷಿತಾ ಪಟಗಾರ ಮತ್ತು ನೇಹಾ ಹರಿಕಾಂತ ಯೋಗವನ್ನು ಪ್ರದರ್ಶಿಸಿದರು. ಯೋಗಾಧ್ಯಯನ ಮಾನಸಿಕ, ದೈಹಿಕ ಸದೃಢತೆಗೆ ಹಾಗೂ ಅಭ್ಯಾಸ ಕೇಂದ್ರೀಕರಿಸಲು ನೆರವಾಗುತ್ತದೆ ಎಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳೊಡನೆ ಶಿಕ್ಷಕವೃಂದದವರೆಲ್ಲರೂ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.