Home Important ಶ್ರೀಭಾರತೀ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

ಶ್ರೀಭಾರತೀ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

SHARE

ಪ್ರತಿ ವರ್ಷದಂತೆ ಈ ವರ್ಷವೂ ಕೂಡ 21 ಜೂನ್ 2018 ರಂದು ಬೆಂಗಳೂರಿನ ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನವನ್ನು ಶಾಲೆಯ ಶಿಕ್ಷಕಿ ಹಾಗೂ ಯೋಗ ಮಾರ್ಗದರ್ಶಕರೂ ಆದ ಶ್ರೀಮತಿ ಆಶಾ ಇವರ ನೇತೃತ್ವದಲ್ಲಿ
ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶಿಕ್ಷಕಿಯಾದ ಚಂದ್ರಕಲಾ ಇವರು ಸ್ವಾಗತಿಸಿದರು. ಯೋಗ ಮಾಡುವ ಮುನ್ನ ಅನುಸರಿಸಬೇಕಾದ ನಿಯಮಗಳು, ಪ್ರತಿಯೊಂದು ಆಸನದಿಂದಾಗುವ ಪ್ರಯೋಜನಗಳನ್ನು ಶಾಲೆಯ ವಿದ್ಯಾರ್ಥಿಗಳು ತಿಳಿಸಿಕೊಟ್ಟರು. ಯೋಗದ ಕುರಿತಾದ ನೃತ್ಯವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಯೋಗದ ಕುರಿತಾದ ನೀಡಿದ ಸಂದೇಶವನ್ನು ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ವೈಷ್ಣವಿ ರಾಜ್ ಇವರು ವಾಚಿಸಿದರು. ಶ್ರೀಮತಿ ಆಶಾ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಓಂಕಾರ ಮಂತ್ರ ಪಠಣ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಆಸನ, ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಯಿತು. ಶ್ರೀಮತಿ ಕೀರ್ತಿ ಇವರು ವಂದನಾರ್ಪಣೆ ಮಾಡಿದರು.
ಸಹಸ್ರಾರು ವಿದ್ಯಾರ್ಥಿಗಳು,ಪಾಲಕರು, ಶಿಕ್ಷಕರು ಉಪಸ್ಥಿತರಿದ್ದರು.