Home Local ಯಶಸ್ವಿಯಾಗಿ ಸಂಪನ್ನವಾದ ಗೋಕರ್ಣ ಗೌರವದ 530 ನೇ ದಿನ.

ಯಶಸ್ವಿಯಾಗಿ ಸಂಪನ್ನವಾದ ಗೋಕರ್ಣ ಗೌರವದ 530 ನೇ ದಿನ.

SHARE

ಗೋಕರ್ಣ: ಪ ಪೂ ಶ್ರೀ ಶ್ರೀ ಅಕ್ಕಮಹಾದೇವಿ ತಾಯಿ , ಆನಂದ ಆಶ್ರಮ, ವಿಜಯಪುರ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 530ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ಶ್ರೀಮತಿ ಸ್ಮಿತಾ ಗಣಪತಿ ಜಂಭೆ ಗೋಕರ್ಣ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .