Home Local ಗೋಕರ್ಣ ಗೌರವ ಪಡೆದ ಶ್ರೀ ಶ್ರೀ ಶೇಖರಯ್ಯ ಸ್ವಾಮಿಗಳು.

ಗೋಕರ್ಣ ಗೌರವ ಪಡೆದ ಶ್ರೀ ಶ್ರೀ ಶೇಖರಯ್ಯ ಸ್ವಾಮಿಗಳು.

SHARE

ಗೋಕರ್ಣ:ಪ ಪೂ ಶ್ರೀ ಶ್ರೀ ಶೇಖರಯ್ಯ ಸ್ವಾಮಿಗಳು , ರೇವಣಸಿದ್ಧೇಶ್ವರಮಠ , ಕಲಘಟಗಿ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 531ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ಉಪಾಧಿವಂತ ಪುರೋಹಿತರಾದ ವೇ ಗಣಪತಿ ಚಿತ್ರಿಗೆಮಠ ಗೋಕರ್ಣ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .