Home Economy ಎರಡು ದಿನಗಳಲ್ಲಿ ಮುಖೇಶ್ ಅಂಬಾನಿ ಸಂಪತ್ತು ರೂ. 9400 ಕೋಟಿ ಏರಿಕೆ!

ಎರಡು ದಿನಗಳಲ್ಲಿ ಮುಖೇಶ್ ಅಂಬಾನಿ ಸಂಪತ್ತು ರೂ. 9400 ಕೋಟಿ ಏರಿಕೆ!

SHARE

ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ಜನರ ಪಟ್ಟಿಯಲ್ಲಿ 15 ನೇ ಸ್ಥಾನಕ್ಕೆ ಏರಿದ್ದು, ವಾಲ್ಮಾರ್ಟ್ನ ಸಂಸ್ಥೆಯ ಜಿಮ್ ವಾಲ್ಟನ್ ಮತ್ತು ರಾಬ್ ವಾಲ್ಟನ್ ಅವರನ್ನು ಹಿಂದಿಕ್ಕಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಅಲಿಬಾಬಾ ಕಂಪನಿಯ ಜ್ಯಾಕ್ ಮಾ ನನ್ನು ಹಿಂದಿಕ್ಕಿ ಮುನ್ನಡೆಯಲಿದ್ದಾರೆ.

ಬ್ಲೂಮ್ ಬರ್ಗ್ ಸೂಚ್ಯಂಕವು ವಿಶ್ವದ 500 ಶ್ರೀಮಂತ ಜನರ ಪಟ್ಟಿಯನ್ನು ಹೊಂದಿದ್ದು, ಇದು ಪ್ರತಿದಿನವೂ ನವೀಕರಿಸಲ್ಪಡುತ್ತದೆ.

ಮುಖೇಶ್ ಅಂಬಾನಿ ಅವರು ಜೂನ್ 19 ರಂದು ರೂ. 2.75 ಲಕ್ಷ ಕೋಟಿ ಮೌಲ್ಯ ಹೊಂದಿದ್ದಾರೆ. ಜಾಕ್ ಮಾ ನಿವ್ವಳ ಮೌಲ್ಯ 3.11 ಲಕ್ಷ ಕೋಟಿಯೊಂದಿಗೆ 14ನೇ ಸ್ಥಾನದಲ್ಲಿದ್ದಾರೆ. ರಿಲಯನ್ಸ್ ಇಂಡಿಯಾ ಷೇರುಗಳಲ್ಲಿ ಏರಿಕೆಯಾದ ನಂತರ ಸಂಪತ್ತು ಹೆಚ್ಚಾಗಿದ್ದು, ಕೇವಲ ಎರಡು ದಿನಗಳಲ್ಲಿ ಅಂಬಾನಿ ಸಂಪತ್ತು ರೂ. 9400 ಕೋಟಿ ಹೆಚ್ಚಾಗಿದೆ.

ಜೆಫ್ ಬೆಜೊಸ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದು, 144.8 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ 92.8 ಬಿಲಿಯನ್ ಡಾಲರ್ ಮೌಲ್ಯವಿದೆ.

source: goodreturns