Home Important ಏರ್‌ ಇಂಡಿಯಾ ಮಹಾರಾಜ ಬಿಸಿನೆಸ್‌ ಕ್ಲಾಸ್‌ ಸೀಟುಗಳ ಸೇವೆಯನ್ನು ಆರಂಭಿಸಿದೆ

ಏರ್‌ ಇಂಡಿಯಾ ಮಹಾರಾಜ ಬಿಸಿನೆಸ್‌ ಕ್ಲಾಸ್‌ ಸೀಟುಗಳ ಸೇವೆಯನ್ನು ಆರಂಭಿಸಿದೆ

SHARE

ನವದೆಹಲಿ : ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮಹಾರಾಜ ಬಿಸಿನೆಸ್‌ ಕ್ಲಾಸ್‌ ಸೀಟುಗಳ ಸೇವೆಯನ್ನು ಆರಂಭಿಸಿದೆ. ಈ ಹೊಸ ಸೇವೆ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಲಭ್ಯ.

ಈ ಹೊಸ ಸೇವೆ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್‌ ಸಿನ್ಹಾ ವಾರದ ಆರಂಭದಲ್ಲಿಯೇ ಪ್ರಕಟಿಸಿದ್ದರು. ಮೊದಲ ದರ್ಜೆ ಮತ್ತು ಬಿಸಿನೆಸ್‌ ಕ್ಲಾಸ್‌ ಪ್ರಯಾಣಿಕರಿಗೆ ಸೇವೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮಹಾರಾಜ ಬಿಸಿನೆಸ್‌ ಕ್ಲಾಸ್‌ ರೂಪುಗೊಂಡಿದೆ. ವಿಭಿನ್ನ ಬಗೆಯ ತಿನಿಸುಗಳು, ಸಿಬ್ಬಂದಿಗೆ ಹೊಸ ಸಮವಸ್ತ್ರ ಸೇರಿದಂತೆ ಪಾಶ್ಚಿಮಾತ್ಯ ಸ್ಪರ್ಶವನ್ನು ನೀಡಲಾಗಿದೆ.