Home Local ಸಿದ್ದಾಪುರದ ಜೆಎಂಎಫ್ಸಿ ಕೋರ್ಟ್​ನಲ್ಲಿ ಡಿಜಿಟಲ್ ಲೈಬ್ರರಿ ಉದ್ಘಾಟನೆ

ಸಿದ್ದಾಪುರದ ಜೆಎಂಎಫ್ಸಿ ಕೋರ್ಟ್​ನಲ್ಲಿ ಡಿಜಿಟಲ್ ಲೈಬ್ರರಿ ಉದ್ಘಾಟನೆ

SHARE

ಸಿದ್ಧಾಪುರ: ಇಂದಿನ ದಿನಗಳಲ್ಲಿ ಲೈಬ್ರರಿಗೆ ಹೋಗಿ ಓದುವ ಜನರ ಸಂಖ್ಯೆ ಬೆರಳಣಿಕೆಯಷ್ಟು. ಅದಕ್ಕೋಸ್ಕರ ಈಗ ಡಿಜಿಟಲ್ ಲೈಬ್ರರಿಗಳು ಹುಟ್ಟಿಕೊಳ್ಳುತ್ತಿವೆ. ವಕೀಲರಿಗೂ ಕೂಡ ಸೆಕ್ಷನ್​ಗಳ ಅಧ್ಯಯನಕ್ಕೆ ಇ-ಲೈಬ್ರರಿ ಉಪಯುಕ್ತವಾಗಿದೆ. ಆದ್ರೆ ಈಗ ನ್ಯಾಯಾಲಯಕ್ಕೂ ಕೂಡ ಡಿಜಿಟಲ್ ಲೈಬ್ರರಿ ಬಂದಿರೋದು ಖುಷಿಯ ವಿಚಾರವಾಗಿದೆ ಅಂತಾ ಜಿಲ್ಲಾ ಸತ್ರ ನ್ಯಾಯಾಧೀಶ ವಿಠ್ಠಲ್ ಧಾರವಾಡಕರ್ ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ವಿಶೇಷತೆಗಳನ್ನು ಹೊಂದಿರುವ ಡಿಜಿಟಲ್ ಇ-ಲೈಬ್ರರಿಯೊಂದು ಜಿಲ್ಲೆಯಲ್ಲಿ ಪ್ರಥಮವಾಗಿ ಸಿದ್ದಾಪುರದ ಜೆಎಂಎಫ್ಸಿ ಕೋರ್ಟ್​ನಲ್ಲಿ ಆರ್​​.ವಿ. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಹಯೋಗದೊಂದಿಗೆ ಉದ್ಘಾಟನೆಗೊಂಡಿದ್ದು ಸಂತಸದ ವಿಚಾರ ಅಂತ ನಾಯಮೂರ್ತಿಗಳು ತಿಳಿಸಿದ್ದಾರೆ.

ವಿವಿಧ ಹಂತದ ಕೋರ್ಟ್​ಗಳು ಹಾಗೂ ಸುಪ್ರೀಂ ಕೋರ್ಟ್​ನ ಎಲ್ಲ ತೀರ್ಪುಗಳನ್ನು ಕಂಪ್ಯೂಟರ್​ಗೆ ಫೀಡ್ ಮಾಡಲಾಗಿರುತ್ತದೆ. ಅಲ್ಲದೇ, ಕಾನೂನಿನ ಎಲ್ಲ ಸೆಕ್ಷನ್​ಗಳನ್ನು ಒಂದು ಸಾಫ್ಟ್​ವೇರ್ ಅಡಿಯಲ್ಲಿ ದಾಖಲಿಸಲಾಗಿರುತ್ತದೆ. ಕಂಪ್ಯೂಟರ್ ಪರದೆಯಲ್ಲಿ ಈ-ಲೈಬ್ರರಿಯನ್ನು ಆಯ್ಕೆ ಮಾಡಿಕೊಂಡು ಬರೀ ಒಂದು ಅಕ್ಷರ ಟೈಪ್ ಮಾಡಿದ್ರೆ ಸಾಕು. ಅದರ, ಅಡಿಯಲ್ಲಿ ಬರುವ ಸೆಕ್ಷನ್​ಗಳು ಹಾಗೂ ತೀರ್ಪುಗಳ ಉಲ್ಲೇಖ ನಮಗೆ ಸುಲಭವಾಗಿ ಲಭ್ಯವಾಗುತ್ತದೆ.