Home Article ಕಳೆದುಹೋದ ಎಳೆಯ ದಿನಗಳು ಭಾಗ೧೭

ಕಳೆದುಹೋದ ಎಳೆಯ ದಿನಗಳು ಭಾಗ೧೭

SHARE

ನಮಸ್ಕಾರ ನನ್ನವರೇ..ಹಬ್ಬಗಳ ನೆನಪಿನ ಸವಿಯನ್ನುಂಡು ವಾರವಾಯಿತು…ಮತ್ತೆ ಇರುವ ಹಬ್ಬಗಳ ನೆನಪು ಇನ್ನೂ ಸವಿ..

ನುಗಲು ಹುಣ್ಣಿಮೆ..ನಮಗೆ ಮುಂಜಿ ಆಗುವವರೆಗೆ ಇಷ್ಟವಾಗಿತ್ತು..ಅಪ್ಪ ತೆಗದು ಹಾಕಿದ ಜನಿವಾರಕ್ಕೆ ಕುಂಕುಮ‌ ಅರಿಶಿನ..ಹಾಕಿ ನಾವು ಹಾಕಿಕೊಳ್ಳುವುದು ವಾಡಿಕೆ..ನಮ್ಮನೆಯಲ್ಲಿ ಆಯಿ ಹೆಚ್ಚಾಗಿ ಮಾಡಿದ್ದು ತಟ್ಟೆ ಪಾಯಸವೇ..ತಟ್ಟೆಯಲ್ಲಿ ಒಂದು ಸೊಟ್ಗಾನ್ನ ಎರಡು ಚಮಚ ಸಕ್ಕರೆ..ಹನಿ ಹಸಿಹಾಲು..ಸೇರಿಸಿದರೆ ತಟ್ಟೆಪಾಯಸ ಆಗುತ್ತಿತ್ತು.ಅದೂ ನಮಗೆ ವಿಶೇಷವೇ..ಯಾಕೆಂದರೆ ಸಕ್ಕರೆ ಹಾಕುತ್ತಾರೆಂದು ಕದ್ದು ಚಹಾ ಕುಡಿದವರು..ಮರುದಿನ ಶಾಲೆಯಲ್ಲಿ ಅಂಗಿಗೆ ಮೇಲಿನ ಬಟ್ಟಣ್ಣ ಹಾಕುತ್ತಿರಲಿಲ್ಲ..ಯಾಕೆಂದರೆ ನಮ್ಮ ಜನಿವಾರ ಎಲ್ಲರಿಗೂ ಕಾಣಲೆಂದು..ಚಿನ್ನದ ಸರ ಹಾಕಿದವರಷ್ಟು ಪೊಗರು ನಮಗೆ..ಇನ್ನು ಚೌತಿಹಬ್ಬ ನಮಗೆ ಸ್ವರ್ಗ..ನಮ್ಮನೆಯಲ್ಲಿ ಗಣಪತಿ ಬರುತ್ತಿರಲಿಲ್ಲ..ಯಾರಾದರೂ ಮುಂಚಿನ ದಿನ ರಾತ್ರೆ ಗಣಪತಿ ಮಾಡಿ ತಂದು ತುಳಸಿಕಟ್ಟೆಮೇಲೆ ತಂದಿಡುತ್ತಾರೋ ಎಂದು ಕಾಯುತ್ತಿದ್ದೆವು..ಯಾಕೆಂದರೆ ಗಣಪತಿ ಬಂದರೆ ಎಲ್ಲಾ ತಿಂಡಿ ಮಾಡುತ್ತಾರೆಂದು ಆಸೆ ನಮಗೆ.

ಅದಿನ ಹೊದ್ಲು ಕಲಸಿ ದೇವಸ್ಥಾನಕ್ಕೆ ಹೊಗಿ ನೈವೇದ್ಯಮಾಡಿ ಬರುವಾಗ ಹಂಚುತ್ತ ಬರುವುದು ವಾಡಿಕೆ.ಇಂದೂಅದು ಇದೆ. ನಾವು ಆ ಹೊದ್ಲ ಕಮ್ಮಯ್ಯ ತಿನ್ನಲು ಹಪಗೆರೆಯುತ್ತಿದ್ದೆವು.ಮನೆಯಲ್ಲಿ ಕಡ್ಳೆ ಪಂಚಕಜ್ಜ.ಪೂಜೆ ಅಗುವವರೆಗೆ ನಮಗೆ ಗಾಬರಿ.ರಾಶಿ ಆರತಿ ಮಾಡಿದರೂ..ಸಿಟ್ಟು ಬರುತ್ತಿತ್ತು.
ಒಂಚಾಮೃತಕ್ಕೆ ಒಂದು ಜಗಳ.
ಚಕ್ಕಲಿ..ಪೋರಿ..ಡಬ್ಬಿಗಟ್ಳೆ ಮಾಡಿಡಿತ್ತಿದ್ದರು.ಮುಸುರೆ ಆಗಬಾರದೆಂದು ಅತ್ತಿಮರದ ಬೇರು ಕಡಿದ ನೀರುಹಾಕಿ ಮಾಡುತ್ತಿದ್ದರು.ಅದರೂ ಹಬ್ಬದದಿನ ನಮಗೆ ಅಟ್ಟ ಹತ್ತಲು ಕೊಡುತ್ತಿರಲಿಲ್ಲ.ಎಲ್ಲವನ್ನು ಅಟ್ಟಕ್ಕೆ ಇಟ್ಟು ..ಮಣೆ ಹೇರಿ ಇಡುತ್ತಿದ್ದರು.ಯಲಪಂಚಮಿ ದಿನ ಧರ್ಮ ಹಾಕು ಪದ್ಧತಿ ಇತ್ತು.ಅಗ ಇತರೆ ಜಾತಿಮನೆಗಳಲ್ಲಿ ತಿಂಡಿ ಮಾಡುತ್ತಿರಲಿಲ್ಲ..ಒಡೆಯನ ಮನೆಯಲ್ಲಿ ಮಾಡಿದ್ದನ್ನು ಯಲಪಂಚಮಿ ದಿನ ಎಲ್ಲರಿಗು ಕೊಡುವುದು ವಾಡಿಕೆ.ಹಬ್ಬದ ದಿನ ಎಲ್ಲ ಒಕ್ಕಲುಮನೆಗೂ ಊಟ ಬಡಿಸಿಕೊಡುತ್ತಿದ್ದರು.ಎಲ್ಲರ ಮನೆ ಹೆಂಗಸರೂ..ತಪ್ಪಲೆ ಬೊಡ್ಡೆ..ಉಗ್ಗ..ಎಲ್ಲತರುತ್ತಿದ್ದರು.ಅದರಲ್ಲಿ ನಮ್ಮನೆಯಲ್ಲಿ ಮಾಡಿದ ಅನ್ನ ಹುಳಿ ಪಾಯಸ ಎಲ್ಲ ಹಾಕಬೇಕಾಗಿತ್ತು..ಅದನ್ನು ಬಡಿಸುವಾಗ ‘ನಮ್ಮನೆ ಮಗು ಬಂದದೆ..’ಹೇಳಿ ಅನ್ನ..ಪಾಯಸ ಸ್ವಲ್ಪ ಹೆಚ್ಚಿಗೆ ಹಾಕಿಸಿಕೊಳ್ಳುತ್ತಿದ್ದರು.ಆ ಪ್ರೀತಿ ನೆನಪಾದರ ನನಗೆ ಈಗ ಕಣ್ಣೀರು ಬರುತ್ತದೆ..ಅನ್ನಕ್ಕೆ ಎಷ್ಟು ಬೆಲೆ ಇದೆಯೆಂದು..ಅರ್ಥವಾಗಿ..ಹಬ್ಬದ ಮರುದಿನ..ಧರ್ಮಹಾಕುವ ದಿನ ನಾವೆಲ್ಲ ಬೆಳಿಗ್ಗೆ ಮುಂಚೆ ಎದ್ದು ಪೋರಿಡಬ್ಬಿ ಹಿಡಿದು ಹೊಳ್ಳಿಯ ಮೇಲೆ ಕುಳಿತುಕೊಳ್ಳುತ್ತಿದ್ದೆವು.ಜಾತಿಬೇಧವಿಲ್ಲದೆ..ಸಾಯಬ್ರ ಮಕ್ಳು..ಬರುತ್ತಿದ್ದರು.ಆಗ ಕೊಟ್ಟೆ ಇರಲಿಲ್ಲ..ಕೆಸುವಿನ ಎಲೆ ತೆಗೆದುಕೊಂಡು ಬರುತ್ತಿದ್ದರು.ಆದಿನ ಸಂಜೆವರೆಗೂ ಬರುತ್ತಿದ್ದರು..ಸಂಜೆಯಾಯಿತೆಂದರೆ..ನಮಗೆ ಗಣಪತಿ ಬಿಡುವಲ್ಲಿ ಹೋಗುವ ಗಡಿಬಿಡಿ..ಯಾರಾದರೂ ಒಬ್ಬರು ನಮಗೆ ಗಣಪತಿ ಹೆಕ್ಕಿಕೊಡುತ್ತಿದ್ದರು.ಎಲ್ಲರ ಮನೆ ಗಣಪತಿ ನೋಡಲು ಹೋದಾಗಲೇ..ನಾವು ನನಗೆ ಗಣಪತಿ ಬೇಕು ಮುಳುಗಿಸಬೇಡಿ..ಎಂದು ತೀಡಿ ಬರುತ್ತಿದ್ದೆವು..ಮಾಪಾರಿ ಮಾಸ್ತರ ಮನೆ ಗಣಪತಿ ಶೆಡ್ಡಿನ ಗುಂಡಿಯಲ್ಲಿ ಮುಳುಗಿಸುತ್ತಿದ್ದರು..ಅದುಸಿಗುತ್ತಿರಲಿಲ್ಲ..ಗಣಪತಿ ನೋಡಲು ಹೋದಾಗ ಪಂಚಕಜ್ಜ ತಿನ್ನಲು ಕೊಡುತ್ತಿದ್ದರು..ನಾವು ಎರಡು..ಮೂರುಸಲ ಬೇಡಿ ತಿಂದದ್ದು ನೆನಪಿದೆ..ಮರುದಿನ ಉಚ್ಚಾಟ..ಹೈಗುಂದ ಡಾಕ್ಟರ ಔಷಧಿ..ಇದು ಪ್ರತಿವರ್ಷ.ಹೆಕ್ಕಿ ತಂದ ಗಣಪತಿಯನ್ನು ಕೊಟ್ಟಿಗೆ ಗೋಡೆಯಮೇಲೆ ಇಟ್ಟುಪೂಜೆ..ನಮಗೆ ಅದೂ ಆಟವೇ.ಮರುದಿನ ಶಾಲೆಗೆ ಹೋಗುವಾಗ ಮಾಸ್ತರಿಗೆ ಪೊಟ್ಳೆ ಕೊಡುವುದು ಪದ್ದತಿ..
ಇಂದು..ಮೊದಲಿನಂತೆ ಕಜ್ಜಾಯ ಮಾಡುವವರಿಲ್ಲ..ಮಾಡಿದರೂ ತಿನ್ನುವವರಿಲ್ಲ..ದಾನಧರ್ಮ..ಕೊಡುವವರಿಲ್ಲ..ಕೊಟ್ಟರೂ ಪಡೆವವರಿಲ್ಲ..ನಮ್ಮ ಪದ್ಧತಿಗಳು..ಆಚರಣೆಗಳುಸುಧಾರಣೆಯ ಗಾಳಿಗೆ ..ಅಪಾರ್ಥಗೊಳಿಸಲ್ಪಟ್ಟು..ಭಾನಾತ್ಮಕ ಸಂಬಂಧಗಳು..ಮಾಯವಾಗಿವೆಹಬ್ಬಗಳು ಆಡಂಬರಗೊಂಡು..ಬೀದಿಬೀದಿಯಲ್ಲಿ ದೇವರು ಕುಳಿತು..ಚಂದಾಎತ್ತುವ..ಎತ್ತಿದ ಚಂದಾವನ್ನು..ಚಿಂದಿಮಾಡುವ..ಅದೆಷ್ಟೋ ಸಂಘಗಳ ನಡುವೆಯೂ..ಕೆಲವು ಸಂಘಟನೆಗಳು..ಭಕ್ತಿಭಾವಗಳಿಂದ..ಸಾಂಸ್ಕೃತಿಕವಾಗಿ ಆಚರಿಸುತ್ತಿವೆ…
ತಿಗಣೇಶ ಮಾಗೋಡ.
9343596619.