Home Local ಕ.ರಾ.ಮಾ.ಶಾ.ನೌ.ಸಂಘ ತಾಲೂಕಾ ಘಟಕದ ಅಧ್ಯಕ್ಷರಾಗಿ ಅನಿಲ್ ರೋಡ್ರಿಗಸ್ ಆಯ್ಕೆ

ಕ.ರಾ.ಮಾ.ಶಾ.ನೌ.ಸಂಘ ತಾಲೂಕಾ ಘಟಕದ ಅಧ್ಯಕ್ಷರಾಗಿ ಅನಿಲ್ ರೋಡ್ರಿಗಸ್ ಆಯ್ಕೆ

SHARE

ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಹಿರಿಯ ವಿಜ್ಞಾನ ಶಿಕ್ಷಕರಾದ ಅನಿಲ್ ಎಸ್.ರೋಡ್ರಿಗಸ್ ಅವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕುಮಟಾ ಘಟಕದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಭದ್ರಕಾಳಿ ಗೋಕರ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಜಿ.ನಾಯಕ್ ದೊರೆ ಮತ್ತು ಡಿಜೆವಿಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದಯಾನಂದ ದೇಶಭಂಡಾರಿ ಹಾಗೂ ಕಾರ್ಯದರ್ಶಿಯಾಗಿ ಎಸ್.ಕೆ.ಪಿ.ಕತಗಾಲ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಎಸ್.ಕೊರವರ ಆಯ್ಕೆಗೊಂಡಿರುವರು.

ಸಂಘಟನಾ ಕಾರ್ಯದರ್ಶಿಯಾಗಿ ರಾಮಕೃಷ್ಣ ಎನ್.ನಾಯಕ, ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಮಾಸೂರ ಹೈಸ್ಕೂಲಿನ ಮುಖ್ಯ ಶಿಕ್ಷಕ ಶಿವಾ ನಾಯಕ್ ಸಹಕಾರ್ಯದರ್ಶಿಗಳಾಗಿ ರಾಮನಾಥ ಪ್ರೌಢಶಾಲೆಯ ಶಿಕ್ಷಕ ಆರ್.ಡಿ.ನಾಯ್ಕ, ಬಂಕಿಕೊಡ್ಲ ಆನಂದಾಶ್ರಾಮ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಎಂ.ಎಂ.ಚಂದಾವರ, ತೌಹಿದ್ ಪ್ರೌಢಶಾಲೆ ಬಾಡದ ಶಿಕ್ಷಕ ಶ್ರೀಕಾಂತ ಪಟಗಾರ, ಕೋಶಾಧ್ಯಕ್ಷರಾಗಿ ಜನತಾ ವಿದ್ಯಾಲಯ ಧಾರೇಶ್ವರದ ಶಿಕ್ಷಕ ಸಿ.ಎಂ.ಪೂಜಾರ ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಎಂ.ರಮೇಶ ಉಪಾಧ್ಯಾಯ ಮತ್ತು ಗೌರವ ಕಾರ್ಯದರ್ಶಿಯಾಗಿ ಬಿ.ಎಸ್.ಬಿ ಗೌಡರ್ ಇರುತ್ತಾರೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.