Home Local ಸಮರ್ಥ ಆಡಳಿತ ನೀಡಿದ ಮೋದಿಯವರ ಆಡಳಿತದ ಬಗ್ಗೆ ಜನರಿಗೆ ತಿಳಿಸಲು ನಾಳೆ ಕುಮಟಾದಲ್ಲಿ ಬೈಕ್ ರ್ಯಾಲಿ.

ಸಮರ್ಥ ಆಡಳಿತ ನೀಡಿದ ಮೋದಿಯವರ ಆಡಳಿತದ ಬಗ್ಗೆ ಜನರಿಗೆ ತಿಳಿಸಲು ನಾಳೆ ಕುಮಟಾದಲ್ಲಿ ಬೈಕ್ ರ್ಯಾಲಿ.

SHARE

ಕುಮಟಾ: ಬಿಜೆಪಿ ಕೇಂದ್ರ ಸರಕಾರ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಮೋದಿಯವರು ಸಮರ್ಥ ಆಡಳಿತ ನೀಡಿರುವ ಬಗ್ಗೆ ಜನತೆಗೆ ತಿಳಿಸುವ ನಿಟ್ಟಿನಲ್ಲಿ ನಾಳೆ ಕುಮಟಾದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಇಂದು ಪಟ್ಟಣದ ಬಿ ಜೆ ಪಿ ಕಾರ್ಯಾಲಯದಲ್ಲಿ ಮಾಧ್ಯಮಘೋಷ್ಟಿ ಕರೆಯಲಾಗಿತ್ತು.

ಈ ಸಂದರ್ಭದಲ್ಲಿ ಶಾಸಕ ದಿನಕರ ಕೆ ಶೆಟ್ಟಿಯವರು ಮಾತನಾಡಿ ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷ ಗಳು ಕಳೆದಿವೆ. ಪ್ರಪಂಚವೇ ಒಪ್ಪಿದ ಪ್ರಧಾನ ಮಂತ್ರಿಯನ್ನು ಕಂಡಿದ್ದೇವೆ ಅತಿ ಹೆಚ್ಚು ಅಭಿವೃದ್ದಿ ಕೆಲಸಗಳಾಗಿವೆ ಈ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಲು ಕುಮಟಾ ಪಟ್ಟಣದಾದ್ಯಂತ ಜೂ‌ನ್ 28 ಗುರುವಾರದಂದು ಬೈಕ್ ರೇಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ತಾಲೂಕಾ ಅಧ್ಯಕ್ಷ ಕುಮಾರ ಮಾರ್ಕಾಂಡೇಯ ಕಾರ್ಯಕ್ರಮ ಕುರಿತು ಹೆಚ್ಚಿನ ಮಾಹಿತಿ ನೀಡಿದರು

ಈ ಸಂದರ್ಭದಲ್ಲಿ ಡಾ ಜಿ ಜಿ ಹೆಗಡೆ ನಾಗರಾಜ ನಾಯಕ ಪ್ರೊ ಎಂ ಜಿ ಭಟ್ಟ ಆಶೋಕ ಪ್ರಭು ಜಿಲ್ಲಾ ಪಂಚಾಯತ ಸದಸ್ಯ ಗಜು ಪೈ ಸುದರ್ಶನ ಹೆಗಡೆ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.