Home Local ಗೋಕರ್ಣ ಗೌರವ ಪಡೆದ ಶ್ರೀ ಶ್ರೀ ಸ್ವಾಮಿ ಲಲಿತೇಶ್ವರಾನಂದಜೀ ಮಹಾರಾಜ್

ಗೋಕರ್ಣ ಗೌರವ ಪಡೆದ ಶ್ರೀ ಶ್ರೀ ಸ್ವಾಮಿ ಲಲಿತೇಶ್ವರಾನಂದಜೀ ಮಹಾರಾಜ್

SHARE

ಗೋಕರ್ಣ: ಪ ಪೂ ಶ್ರೀ ಶ್ರೀ ಸ್ವಾಮಿ ಲಲಿತೇಶ್ವರಾನಂದಜೀ ಮಹಾರಾಜ್ , ರಾಮಕೃಷ್ಣ ವಿವೇಕಾನಂದ ಆಶ್ರಮ, ಹರಿದ್ವಾರ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 537ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ಅಮೃತಾನ್ನ ವಿಭಾಗದ ಕಾರ್ಯಕರ್ತರಾದ ಶ್ರೀ ಚಂದ್ರಮೌಳಿ ಹೆಗಡೆ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .