Home Local “ಅನಂತಕುಮಾರ ಹೆಗಡೆ ಲೋಫರ್”ಎಂದ ಅಸ್ನೋಟಿಕರ್: ಬಿಜೆಪಿಗರ ಉತ್ತರವೇನು ಗೊತ್ತಾ?

“ಅನಂತಕುಮಾರ ಹೆಗಡೆ ಲೋಫರ್”ಎಂದ ಅಸ್ನೋಟಿಕರ್: ಬಿಜೆಪಿಗರ ಉತ್ತರವೇನು ಗೊತ್ತಾ?

SHARE

ಸಾಂದರ್ಭಿಕ ಚಿತ್ರ

ಕಾರವಾರ: ಬಿಜೆಪಿ ಪ್ರಮುಖ ಹಾಗೂ ಕೇಂದ್ರ ಸಚಿವ “ಅನಂತಕುಮಾರ ಹೆಗಡೆ ಲೋಫರ್” ಎಂದು ಮಾಧ್ಯಮದ ಎದುರು ಕಾರವಾರದ ಜೆಡಿಎಸ್ ಪ್ರಮುಖ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅನಂತ ಕುಮಾರ ವಿರುದ್ದ ಗುಡುಗಿದ್ದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆನಂದ್ ಅಸ್ನೋಟಿಕರ್, “ಅನಂತಕುಮಾರ ಹೆಗಡೆ ಒಬ್ಬ ಲೋಫರ್…ನೀಚ, ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿದ್ದ ಧ್ವಜವನ್ನ ತಾನೇ ಹಾರಿಸಿದ್ದು ಅಂತ ಆರ್ಎಸ್ಎಸ್ ನಲ್ಲಿ ಅದು ಮಾಡಿದ್ದೀನಿ, ಇದು ಮಾಡಿದ್ದೀನಿ ಅಂತ ಕೊಚ್ಕೊಳ್ತಾನೆ” ಅಂತ ವಾಗ್ದಾಳಿ ನಡೆಸಿದರು.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಈ ಕುರಿತು ಬಿಜೆಪಿ ಟಾಂಗ್ ನೀಡಿದೆ. “ಬಿಜೆಪಿ ಟಿಕೆಟ್ ಕೊಡಬೇಕೆಂದು ಅನಂತ್ ಅವರನ್ನು ಕುಲದೇವರು ಎಂದು ಹೇಳಿದ್ದ ಆನಂದ್ ಈಗ ದುಶ್ಯಾಸನನಂತೆ ಸೀರೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾನೆ. ಇನ್ನು ಮುಂದೆ ಹೀಗೆ ಮಾತಾಡಿದರೆ ಹುಷಾರ್!” ಎಂದು ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಲಾಗಿದೆ.

” ಅನಂತಕುಮಾರ್ ಹೆಗಡೆಗೆ ಬೆರಳು ತೋರಿಸುವಷ್ಟು ಆನಂದ್ ಅಸ್ನೋಟಿಕರ್ ಬೆಳದಿಲ್ಲ. ಲೋಫರ್ ಎಂದು ಹೇಳುವಾಗ ಆನಂದ್ ಗೆ ಎಷ್ಟು ಜನ ಈ ಹಿಂದೆ ಲೋಫರ್ ಎಂದಿದ್ದಾರೆ ಎಂದು ಸ್ವಲ್ಪ ಅವರೂ ತಿಳಿದುಕೊಂಡು ಮಾತನಾಡಲಿ, ಕಾರವಾರ- ಅಂಕೋಲಾ ಜನರಿಗೆ ದುರ್ಯೋಧನ ಯಾರು? ದುಶ್ಯಾಸನ ಯಾರು? ಮತ್ತು ಧರ್ಮರಾಯನು ಯಾರು? ಎಂದು ಚೆನ್ನಾಗಿ ಗೊತ್ತಿದೆ. ” ಎಂದು ಹೇಳಲಾಗಿದೆ.