Home Important ಸಾಲಮನ್ನಾ ಜನತೆಗೆ ಬೀಳಲಿದೆ ಹೊರೆ! ಏನಾಗುತ್ತೋ ಕಾದು ನೋಡಬೇಕಿದೆ!

ಸಾಲಮನ್ನಾ ಜನತೆಗೆ ಬೀಳಲಿದೆ ಹೊರೆ! ಏನಾಗುತ್ತೋ ಕಾದು ನೋಡಬೇಕಿದೆ!

SHARE

ಬೆಂಗಳೂರು: ರೈತರ ಸಾಲ ಮನ್ನಾ ಮಾಡುವ ವಿಚಾರ ಸರಕಾರಕ್ಕೆ ಸ್ಪಷ್ಟವಾದ ತೀರ್ಮಾನತೆಗೆದುಕೊಂಡಿದೆ. ಆದ್ರೆ ಎಷ್ಟು ಸಾಲಾ ಮನ್ನಾ ಮಾಡಬೇಕು ಎಂಬುದು ಬಜೆಟ್ ನಲ್ಲಿ ಗೊತ್ತಾಗುವ ವಿಚಾರವಾದರೂ ರೈತರ ಸಾಲ ಮನ್ನಾ ಎಷ್ಟೇ ಮಾಡಿದ್ರು ಸಹ ಆ ಹಣವನ್ನು ಸರಕಾರ ಹೇಗೆ ಹೊಂದಿಸುತ್ತೆ.

ಸಾಲಮನ್ನಾದಿಂದ ಸರ್ಕಾರದ ಬೊಕ್ಕಸದ ಮೇಲೆ ಸರಿ ಸುಮಾರು 50 ಸಾವಿರದಷ್ಟು ಕೋಟಿಯಷ್ಟು ಉಂಟಾಗಲಿರುವ ನಷ್ಷವನ್ನು ತಡೆದುಕೊಳ್ಳುವ ಸಲುವಾಗಿ ಪೆಟ್ರೋಲ್, ಡಿಸೇಲ್ ಮೇಲಿನ ಸೆಸ್ ದರವನ್ನು ಹೆಚ್ಚಳ ಮಾಡುವುದಕ್ಕೆ ಸರ್ಕಾರ ಮುಂದಾಗಲಿದೆಯಂತೆ.

ಸರಕಾರದ ಕೆಲ ಭಾಗ್ಯಗಳಿಗೆ ಕಡಿವಾಣ, ರಜಾದಿವಸಗಳಲ್ಲಿ ಇಂದಿರಾ ಕ್ಯಾಂಟಿನ್ ಗಳಿಗೆ ರಜಾ ಭಾಗ್ಯ, ಎಸ್ಕಾಂ, ಬೆಸ್ಕಾಂ ಗಳಿಗೆ ನೀಡಲಾಗುವ ಸರಿ ಸುಮಾರು 10 ಸಾವಿರ ಕೋಟಿ ಸಹಾಯ ಧನಕ್ಕೆ ಕೊಕ್. ಹಿಂದಿನ ಸರ್ಕಾರದ ಲ್ಯಾಪ್ ಟಾಪ್ ಭಾಗ್ಯಕ್ಕೆ ವಿದಾಯ. ನೊಂದಣಿ ಶುಲ್ಕ ಹೆಚ್ಚಳ ಹೀಗೆ ನಷ್ಟವನ್ನು ಸರಿತೂಗಿಲಸಲು ಸರಕಾರ ಚಿಂತನೆ ನಡೆಸಿದೆ. ಬಜೆಟ್ ನಂತರ ಯಾವುದು ಎಷ್ಟು ದುಬಾರಿ ಆಗಬಹುದು ಎಂಬುದು ಕಾದುನೋಡಬೇಕಿದೆ..